
ಪಿಆರ್‌ಕೆ ಆ್ಯಪ್ ಸಂದರ್ಶನದಲ್ಲಿ ಮಾತನಾಡಿರುವ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು, ರಾಜ್‌ಕುಮಾರ್ ಹಾಗೂ ಅಪ್ಪು ಅವರ ಸರಳತೆ ಬಗ್ಗೆ ಮಾತನಾಡಿದ್ದಾರೆ.
ಸಂದರ್ಶನದಲ್ಲಿ ಪುನೀತ್ ಅವರೊಂದಿಗೆ ಕಳೆದ ಹಲವು ಸಂಗತಿಗಳನ್ನು ಹಂಚಿಕೊಂಡಿರುವ ಅಶ್ವಿನಿ, ‘ನಮ್ಮ ಹಳೆಯ ಮನೆಯ ನೆಲಮಾಳಿಗೆಯಲ್ಲಿ ಜಿಮ್ ಮಾಡಲು ಅವಕಾಶ ಇತ್ತು. ತಮ್ಮ ಬಿಡುವಿನ ವೇಳೆಯಲ್ಲಿ ಅಪ್ಪಾಜಿ ಹಾಗೂ ಪುನೀತ್ ಅಲ್ಲೇ ವರ್ಕೌಟ್ ಮಾಡುತ್ತಿದ್ದರು. ಆದರೆ, ಅಪ್ಪಾಜಿ ( ಡಾ. ರಾಜ್‌ಕುಮಾರ್) ಅವರು ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಅದನ್ನು ಗಮನಿಸಿದ ಅಪ್ಪು, ಹತ್ತು ಸಾವಿರ ಕೊಟ್ಟು ಒಳ್ಳೆಯ ಗುಣಮಟ್ಟದ ಶೂಗಳನ್ನು ಅಪ್ಪಾಜಿಗೆ ತಂದುಕೊಟ್ಟಿದ್ದರು. ಆದರೆ ಆ ಶೂವಿನ ಬೆಲೆ 200 ರೂ ಎಂದಿದ್ದರು. ಕಾರಣ, ಅಪ್ಪಾಜಿ ಅವರು ದುಬಾರಿ ವಸ್ತುಗಳನ್ನು ಇಷ್ಟ ಪಡುತ್ತಿರಲಿಲ್ಲ’ ಎಂದು ರಾಜ್‌ಕುಮಾರ್ ಅವರ ಸರಳತೆ ಬಗ್ಗೆ ಹೇಳಿಕೊಂಡಿದ್ದಾರೆ.
ಅಷ್ಟೆ ಅಲ್ಲ, ‘ಅಪ್ಪಾಜಿ ಸಿನಿಮಾ ನೋಡುವಾಗ ಮನೆಯ ಸದಸ್ಯರು ಕೂಡ ಅವರ ಜತೆ ಕುಳಿತು ಚಿತ್ರಗಳನ್ನು ವೀಕ್ಷಿಸಬೇಕಿತ್ತು. ಅವರು ಸೊಸೆಯಂದಿರನ್ನು ತಮ್ಮ ಮಕ್ಕಳಂತೆ ಕಾಣುತ್ತಿದ್ದರು. ನಾವು ಕೂಡ ವಿಶ್ರಾಂತಿ ಪಡೆಯಬೇಕು ಎಂಬುವುದು ಅವರ ನಿಲುವಾಗಿತ್ತು‘ ಎಂದು ಅಶ್ವಿನಿಯವರು ರಾಜ್‌ಕುಮಾರ್ ಅವರ ಬಗ್ಗೆ ಗುಣಗಾನ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.