
ನವರಸ ನಾಯಕ ಜಗ್ಗೇಶ್ ಅವರು ಡಾ. ರಾಜ್‌ಕುಮಾರ್ ಅವರ ಜತೆಗಿನ ಚಿತ್ರಗಳನ್ನು ಹಂಚಿಕೊಂಡು, ಅವರ ಆತ್ಮೀಯ ಸಂಬಂಧದ ಬಗ್ಗೆ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?
ರಾಜಣ್ಣ ಅವರು ಹಾಸ್ಯರತ್ನ ಇದ್ದಂತೆ ಸಣ್ಣದಾಗಿ ಹಾಸ್ಯಮಾಡಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದರು. ಈ ಚಿತ್ರವನ್ನು ನೋಡಿ, ರಾಜಣ್ಣ ಅವರ ಗುಣ ನೆನೆದು ತುಂಬಾ ಭಾವುಕನಾಗಿಬಿಟ್ಟೆ. ಅಣ್ಣಾವ್ರು ಹಿಮಾಲಯ ಪರ್ವತದಂತೆ ಬೆಳೆದ ನಟರಾಗಿದ್ದರೂ ಸಹಕಲಾವಿದರಿಗೆ ಒಬ್ಬ ಅಣ್ಣನಂತೆ, ತಂದೆಯಂತೆ ಪ್ರೀತಿ ತೋರಿ ಸಂತೋಷ ಹಂಚುತ್ತಿದ್ದರು.
ಇಂಥ ಶ್ರೇಷ್ಠ ರಾಜಋಷಿಗಳ ಸಂಪರ್ಕದಲ್ಲಿ ಬೆಳೆಯುವ ಸೌಭಾಗ್ಯ ನನಗೆ ಸಿಕ್ಕದ್ದು ಜನ್ಮಾಂತರದ ಪುಣ್ಯ. ರಾಜಣ್ಣವರಿಗೆ ಕೊನೆಯವರೆಗೂ ನಾನು ಆಂಜನೇಯನಂತೆ ಇದ್ದೆ.
1992ರಲ್ಲಿ ತೆಗೆದ ಈ ಚಿತ್ರದ ಜಾಗ ಸನ್ನಿವೇಶ ಮರೆತಿರುವೆ. ಆ ಸಮಯದಲ್ಲಿ ನನ್ನ ಮಗ ಗುರುರಾಜ್ 5 ವರ್ಷದ ಕೈಗೂಸು. ಮಡದಿ ಪರಿಮಳ ಹಾಗೂ ನಾನು ರಾಜಣ್ಣನ ಜತೆ ಇದ್ದ ಮಧುರ ಕ್ಷಣವೂ ಅಮೋಘವಾಗಿತ್ತು ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.