ADVERTISEMENT

ಎಲ್ಲರಂಥಲ್ಲ ಪುನೀತ್ ರಾಜ್‌ಕುಮಾರ್: ಅಪ್ಪು ಜತೆಗಿನ ಒಡನಾಟ ಹಂಚಿಕೊಂಡ ನಟ ಯೋಗೇಶ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ನವೆಂಬರ್ 2025, 11:12 IST
Last Updated 12 ನವೆಂಬರ್ 2025, 11:12 IST
   

ಅಶ್ವಿನಿ ಪುನೀತ್ ರಾಜ್‌ಕುಮಾರ್ ಒಡೆತನದ ಪಿಆರ್‌ಕೆ ಆ್ಯಪ್‌ ಸಂದರ್ಶನದಲ್ಲಿ ನಟ ಯೋಗೇಶ್‌ ಮಾತನಾಡಿ, ಅಪ್ಪು ಜತೆಗಿದ್ದ ಆತ್ಮೀಯ ಸಂಬಂಧ ಕುರಿತು ಹಂಚಿಕೊಂಡಿದ್ದಾರೆ.

‘ನಾನು ಅಪ್ಪು ಅವರನ್ನು ಭೇಟಿ ಮಾಡಿದ ಮೊದಲ ದಿನವೇ ನಾನು ನಿಮ್ಮ ಅಭಿಮಾನಿಯಲ್ಲ. ಶಿವಣ್ಣನ ಅಭಿಮಾನಿ ಎಂದಿದ್ದೆ. ಆದರೂ ಅವರು ನನ್ನ ಮೇಲೆ ಕೋಪ ಮಾಡಿಕೊಳ್ಳದೆ ನನ್ನನ್ನು ಪ್ರೀತಿಯಿಂದ ಅಪ್ಪಿಕೊಂಡು ಅವರ ಸಿನಿಮಾಕ್ಕೆ ಬರಮಾಡಿಕೊಂಡಿದ್ದರು’ ಎಂದು ಯೋಗೇಶ್‌ ಹೇಳಿಕೊಂಡಿದ್ದಾರೆ.

‘ಪುನೀತ್ ರಾಜ್‌ಕುಮಾರ್ ಅವರು ಹಳೆಯ ಹಾಡುಗಳನ್ನು ಹೆಚ್ಚು ಕೇಳುತ್ತಿದ್ದರು. ಅವರ ಗುಣಗಳನ್ನು ಯಾರು ಅನುಸರಿಸಲು ಸಾಧ್ಯವೇ ಇಲ್ಲ. ಯಾರು ಬೇಕಾದರೂ ದೊಡ್ಡ ನಟ ಆಗಬಹುದು. ಆದರೆ ಅವರಿಗಿದ್ದ ಒಳ್ಳೆಯ ಗುಣಗಳು ಎಲ್ಲರಿಗೂ ಬರೋಲ್ಲ. ನಾನು ಅವರ ಸಾವನ್ನು ಭ್ರಮೆ ಎಂದು ಭಾವಿಸಿದ್ದೆ. ಆದರೆ ಕೊನೆಯಲ್ಲಿ ಅವರ ದೇಹದ ಮೇಲೆ ಮಣ್ಣು ಹಾಕುವಾಗ ದುಃಖ ತಡಿಯೋಕೆ ಆಗಿಲ್ಲ’ ಎಂದು ಯೋಗೇಶ್‌ ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಹುಡುಗರು‘, ‘ಯಾರೇ ಕೂಗಾಡಲಿ’ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಹಾಗೂ ಯೋಗೇಶ್‌ ಒಟ್ಟಿಗೆ ನಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.