ADVERTISEMENT

ಪುಷ್ಪ | ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ರೊಮ್ಯಾಂಟಿಕ್ ಸೀನ್‌ಗೆ ಕತ್ತರಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಡಿಸೆಂಬರ್ 2021, 8:44 IST
Last Updated 20 ಡಿಸೆಂಬರ್ 2021, 8:44 IST
ಪುಷ್ಪ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ (ಸಂಗ್ರಹ ಚಿತ್ರ)
ಪುಷ್ಪ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ (ಸಂಗ್ರಹ ಚಿತ್ರ)   

ಸುಕುಮಾರ್ ನಿರ್ದೇಶನದ ‘ಪುಷ್ಪ–ದಿ ರೈಸ್ ಭಾಗ-1’ ಚಿತ್ರದಲ್ಲಿ ನಟ ಅಲ್ಲು ಅರ್ಜುನ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ರೊಮ್ಯಾಂಟಿಕ್ ಸೀನ್‌ಗೆ ಕತ್ತರಿ ಪ್ರಯೋಗ ಮಾಡಲಾಗಿದೆ ಎಂದು ವರದಿಯಾಗಿದೆ.

ಈ ಕುರಿತು 'ಇಂಡಿಯಾ ಟುಡೇ' ವರದಿ ಮಾಡಿದೆ. ಪುಷ್ಪ ಸಿನಿಮಾದಲ್ಲಿ ಪುಷ್ಪರಾಜ್ (ಅಲ್ಲು ಅರ್ಜುನ್) ಹಾಗೂ ಶ್ರೀವಲ್ಲಿ (ರಶ್ಮಿಕಾ ಮಂದಣ್ಣ) ನಡುವೆ ಕಾರಿನಲ್ಲಿ ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯವು ವಿವಾದಕ್ಕೀಡಾಗಿತ್ತು.

ಇದು ಕುಟುಂಬದ ಜತೆ ಚಿತ್ರ ನೋಡಲು ಆಗಮಿಸುವ ಪ್ರೇಕ್ಷಕರಿಗೆ ಇಷ್ಟವಾಗುವುದಿಲ್ಲ ಎನ್ನಲಾಗಿದೆ. ಇದರಿಂದಾಗಿ ಸುಮಾರು ಮೂರು ತಾಸಿನ ಸಿನಿಮಾದಿಂದ ವಿವಾದಾತ್ಮಕ ಸೀನ್ ಡಿಲೀಟ್ಮಾಡಲು ಚಿತ್ರತಂಡವು ನಿರ್ಧರಿಸಿದೆ.

ಕೇವಲ ಎರಡು ದಿನಗಳಲ್ಲೇ ಬಾಕ್ಸ್ ಆಫೀಸ್‌ನಲ್ಲಿ ಪುಷ್ಪ ಚಿತ್ರವು ₹100 ಕೋಟಿಗೂ ಹೆಚ್ಚು ಕಲೆ ಹಾಕಿದೆ ಎಂದು ವರದಿಯಾಗಿದೆ. ಡಿಸೆಂಬರ್ 17ರಂದು ಬಿಡುಗಡೆಗೊಂಡಿರುವ ಚಿತ್ರವು, ಅಭಿಮಾನಿಗಳನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.