
2020ರಲ್ಲಿ ಬಿಡುಗಡೆಯಾದ ದಿ ಬನ್ಸಾಲ್ ಮರ್ಡರ್ಸ್ ಆಧಾರಿತ ‘ರಾತ್ ಅಕೇಲಿ ಹೇ’ ಸಿನಿಮಾದ ಮೊದಲ ಭಾಗದಲ್ಲಿ ಅಪರಾಧ, ತನಿಖೆ, ರಹಸ್ಯವನ್ನು ಒಳಗೊಂಡ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಾಗಾಗಿ ಅದರ ಮುಂದುವರಿದ ಭಾಗ ಸದ್ಯದಲ್ಲೆ ಬರಲಿದೆ ಎಂದು ನೆಟ್‌ಫ್ಲಿಕ್ಸ್ ಹೇಳಿದೆ.
ಆರ್‌ಎಸ್‌ವಿಪಿ ಮತ್ತು ಮ್ಯಾಕ್‌ಗಫಿನ್ ಪಿಕ್ಚರ್ಸ್ ನಿರ್ಮಾಣದ ‘ರಾತ್ ಅಕೇಲಿ ಹೇ’ ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಅವರು ಇನ್‌ಸ್ಪೆಕ್ಟರ್ ಜತಿಲ್ ಯಾದವ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಹನಿ ಟ್ರೆಹಾನ್ ಅವರು ನಿರ್ದೇಶನ ಮಾಡಲಿದ್ದು, ಸ್ಮಿತಾ ಸಿಂಗ್ ಅವರು ಚಿತ್ರಕಥೆ ಬರೆಯಲಿದ್ದಾರೆ.
ಚಿತ್ರಾಂಗದಾ ಸಿಂಗ್, ರಜತ್ ಕಪೂರ್, ದೀಪ್ತಿ ನಾವಲ್, ಇಲಾ ಅರುಣ್, ರೇವತಿ, ಅಖಿಲೇಂದ್ರ ಮಿಶ್ರಾ, ಪ್ರಿಯಾಂಕಾ ಸೇಟಿಯಾ, ಸಂಜಯ್ ಕಪೂರ್ ಹಾಗೂ ರಾಧಿಕಾ ಆಪ್ಟೆ ನಟಿಸಿದ್ದಾರೆ.
‘ರಾತ್ ಅಕೇಲಿ ಹೈ’ ಚಿತ್ರವು ಬಿಡುಗಡೆಗೂ ಮುನ್ನ ಈ ನವೆಂಬರ್‌ನಲ್ಲಿ ಗೋವಾದಲ್ಲಿ ನಡೆಯಲಿರುವ 56ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ಪ್ರಥಮ ಪ್ರದರ್ಶನಗೊಳ್ಳಲಿದೆ ಎಂದು ಚಿತ್ರತಂಡ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.