ADVERTISEMENT

ರಚಿತಾ ರಾಮ್‌ ಕಾಣೆಯಾಗಿದ್ದಾರೆ ಎಂದು ಜಾಹೀರಾತು ಕೊಟ್ಟ ಚಿರಂಜೀವಿ ಸರ್ಜಾ!

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 12:27 IST
Last Updated 17 ಜನವರಿ 2020, 12:27 IST
   

ಬೆಂಗಳೂರು:ಚಂದನವನದಲ್ಲಿ ಹೊಸ ಹೊಸ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಚಿರಂಜೀವಿ ಸರ್ಜಾ ಹಾಗೂ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಅಭಿನಯದ 'ಏಪ್ರಿಲ್‌' ಚಿತ್ರದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ.

ರಚಿತ ರಾಮ್‌ ಕಾಣೆಯಾಗಿದ್ದಾರೆ ಎಂದುಚಿರಂಜೀವಿ ಸರ್ಜಾ ಜಾಹೀರಾತು ಫಲಕ ಹಿಡಿದು ನಿಂತಿರುವ ಪೋಸ್ಟರ್‌ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಅದೇ ಪೋಸ್ಟರ್‌ನಲ್ಲಿ ರಚಿತಾರಾಮ್‌ ಅವರು ಪುಟ್ಟ ಬಾಲಕಿ ಮಿಸ್ಸಿಂಗ್‌ ಎಂಬಪೋಸ್ಟರ್ಹಿಡಿದಿದ್ದಾರೆ.

ಚಿರು ಸರ್ಜಾ'ಏಪ್ರಿಲ್‌' ಚಿತ್ರದ ಫಸ್ಟ್‌ಲುಕ್‌ ಅನ್ನು ಟ್ವೀಟ್‌ ಮಾಡಿ ‘ನನ್ನ ಮುಂದಿನ ಚಿತ್ರ ಏಪ್ರಿಲ್‌ಗೆ ನಿಮ್ಮ ಪ್ರೀತಿ ಮತ್ತು ಬೆಂಬಲ ಇರಲಿ... ಜೈ ಅಂಜನೇಯ‘ ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಈ ಪೋಸ್ಟರ್ ನೋಡಿದರೆ ಇದೊಂದು ಸಸ್ಪೆನ್ಸ್‌, ಥ್ರಿಲ್ಲರ್‌ ಸಿನಿಮಾ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ.

ಚಿರುಗೆ ಜೋಡಿಯಾಗಿರಚಿತಾ ರಾಮ್‌ ನಟಿಸುತ್ತಿದ್ದಾರೆ. ಸತ್ಯ ರಾಯಲ ಈ ಸಿನಿಮಾವ ನಿರ್ದೇಶನ ಮಾಡುತ್ತಿದ್ದಾರೆ. ಸಚಿನ್‌ ಬಸ್ರೂರ್‌ ಸಂಗೀತ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.