ADVERTISEMENT

‘ಕಣ್ಣಾ ಮುಚ್ಚೆ...’ ಟೀಸರ್ 

​ಪ್ರಜಾವಾಣಿ ವಾರ್ತೆ
Published 14 ಜನವರಿ 2025, 23:49 IST
Last Updated 14 ಜನವರಿ 2025, 23:49 IST
ಪ್ರಾರ್ಥನಾ, ಅಥರ್ವಪ್ರಕಾಶ್ 
ಪ್ರಾರ್ಥನಾ, ಅಥರ್ವಪ್ರಕಾಶ್    

ರಾಘವೇಂದ್ರ ರಾಜಕುಮಾರ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಕಣ್ಣಾ ಮುಚ್ಚೆ ಕಾಡೇ ಗೂಡೇ’ ಚಿತ್ರದ ಟೀಸರ್‌ ಹಾಗೂ ‘ನಿನ್ನ ನೋಡಿದಾಗಲೇ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಟರಾಜ್ ಕೃಷ್ಣೆಗೌಡ ನಿರ್ದೇಶನದ ಚಿತ್ರ ಶೀಘ್ರದಲ್ಲಿ ತೆರೆಗೆ ಬರಲಿದೆ.

ಹಾಡಿಗೆ ಸಂತೋಷ್ ಜೋಶ್ವಾ ಸಂಗೀತ, ಪುನೀತ್ ಆರ್ಯ ಸಾಹಿತ್ಯ, ವಾಸುಕಿವೈಭವ್-ಸುರಭಿ ಭಾರದ್ವಾಜ್ ಧ್ವನಿಯಿದೆ. ‘ಈಗಾಗಲೇ ತುಳು ಮತ್ತು ಕನ್ನಡ ಚಿತ್ರ ನಿರ್ದೇಶಿಸಿದ್ದು, ಇದು ನನಗೆ ಎರಡನೇ ಅವಕಾಶ. ಈಗಿನ ಟ್ರೆಂಡ್‌ಗೆ ತಕ್ಕಂತೆ ಮರ್ಡರ್ ಮಿಸ್ಟ್ರಿ ಕಥೆಯಿದೆ. ಸಿನಿಮಾವು ಒಂದು ಕೊಲೆಯ ಸುತ್ತ ನಡೆಯುತ್ತದೆ. ಸಸ್ಪೆನ್ಸ್‌, ಥ್ರಿಲ್ಲರ್‌ ಜಾನರ್‌ನ ಸಿನಿಮಾ’ ಎನ್ನುತ್ತಾರೆ ನಟರಾಜ್.

ಅಥರ್ವಪ್ರಕಾಶ್‌ಗೆ ಪ್ರಾರ್ಥನಾ ಜೋಡಿಯಾಗಿದ್ದಾರೆ. ನಿವೃತ್ತ ವೈದ್ಯರಾಗಿ ರಾಘವೇಂದ್ರ ರಾಜ್‌ಕುಮಾರ್ ನಟಿಸಿದ್ದಾರೆ. ಜ್ಯೋತಿಷ್‌ ಶೆಟ್ಟಿ, ದೀಪಕ್‌ ರೈ, ಅರವಿಂದ ಬೋಳಾರ್ ಮುಂತಾದವರು ಅಭಿನಯಿಸಿದ್ದಾರೆ. ದೀಪಕ್‌ಕುಮಾರ್.ಜೆ.ಕೆ ಛಾಯಾಚಿತ್ರಗ್ರಹಣವಿದೆ. ಮಂಗಳೂರು, ಬೆಂಗಳೂರಿನ ಹಲವೆಡೆ ಚಿತ್ರೀಕರಣಗೊಂಡಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.