‘ಯುವರತ್ನ’ ಹಾಗೂ ‘ಬಘೀರ’ ಸಿನಿಮಾಗಳಲ್ಲಿ ಸಣ್ಣ ಪಾತ್ರ ಮಾಡಿದ್ದ ರಾಹುಲ್ ಇದೀಗ ನಾಯಕನಾಗಿ ಬಡ್ತಿ ಪಡೆದಿದ್ದಾರೆ. ‘ನೀ ನಂಗೆ ಅಲ್ಲವಾ’ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯಗೊಂಡಿದೆ. ಮನೋಜ್ ಪಿ ನಡುಲಮನೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇವರು ಈ ಹಿಂದೆ ‘ಆನ, ಮೇರಿ’ ಎಂಬ ಸಿನಿಮಾಗಳನ್ನು ನಿರ್ದೇಶಿಸಿದ್ದರು.
‘ಪ್ರೇಮಕಥೆ ಹೊಂದಿರುವ ಚಿತ್ರವಿದು. ಮಿಡಲ್ ಕ್ಲಾಸ್ ಹುಡುಗನ ಕಥೆ. ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಸಿನಿಮಾ. ಆ್ಯಕ್ಷನ್ ಕೂಡ ಇದ್ದು ಕಮರ್ಷಿಯಲ್ ಕಥೆಯಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಉಷಾ ಭಂಡಾರಿ ಅವರ ಗರಡಿಯಲ್ಲಿ ರಂಗಭೂಮಿ ತರಬೇತಿ ಪಡೆದೆ. ಬಳಿಕ ನಟನಾಗಲು ಡಾನ್ಸ್, ಫೈಟ್‌ಗಳನ್ನು ಕಲಿತೆ. ಸಂಗೀತ ನಿರ್ದೇಶಕ ಸೂರಜ್ ಅವರಿಂದ ಈ ಚಿತ್ರದ ನಿರ್ದೇಶಕ ಮನೋಜ್ ಅವರ ಪರಿಚಯವಾಯಿತು. ಅಲ್ಲಿಂದ ನಮ್ಮ ಸಿನಿಪಯಣ ಪ್ರಾರಂಭವಾಗಿದ್ದು. ಜಯರಾಮ್ ದೇವಸಮುದ್ರ ಬಂಡವಾಳ ಹೂಡಿದ್ದಾರೆ’ ಎನ್ನುತ್ತಾರೆ ರಾಹುಲ್.
ಕಾಶಿಮಾ ರಫಿ ಚಿತ್ರದ ನಾಯಕಿ. ಆರತಿ ಪಡುಬಿದ್ರಿ, ಮಂಜುನಾಥ್ ಹೆಗಡೆ, ಚೇತನ್ ದುರ್ಗ ಮುಂತಾದವರು ಚಿತ್ರದಲ್ಲಿದ್ದಾರೆ. ಸೂರಜ್ ಜೋಯ್ಸ್ ಸಂಗೀತ, ಉದಯ್ ಲೀಲಾ ಛಾಯಾಚಿತ್ರಗ್ರಹಣ, ನಾಗೇಂದ್ರ ಕೆ. ಸಂಕಲನ ಚಿತ್ರಕ್ಕಿದೆ.
ಈಗಾಗಲೇ ಶ್ರೀಮುರಳಿ ಜತೆ ಚಿತ್ರ ಘೋಷಿಸಿರುವ ಸುರಮ್ ಮೂವೀಸ್ ಈ ಹಿಂದೆ ‘ನಿದ್ರಾದೇವಿ Next Door’ ಸಿನಿಮಾ ಮಾಡಿತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.