ADVERTISEMENT

ಪ್ಲಾನ್‌ ಬಿ ರೂಪಿಸಿದ್ದ ಕುಂದ್ರಾ: ಬರಲಿತ್ತು ಹೊಸ ಪೋರ್ನ್‌ ಅಪ್ಲಿಕೇಷನ್‌

ಪಿಟಿಐ
Published 21 ಜುಲೈ 2021, 17:26 IST
Last Updated 21 ಜುಲೈ 2021, 17:26 IST
ರಾಜ್‌ ಕುಂದ್ರಾ
ರಾಜ್‌ ಕುಂದ್ರಾ   

ಮುಂಬೈ: ರಾಜ್‌ ಕುಂದ್ರಾರ ವಿಯಾನ್‌ ಕಂಪನಿ ನಿರ್ಮಿಸುತ್ತಿದ್ದ ನಡೆಸುತ್ತಿದ್ದ ಅಶ್ಲೀಲ ಚಿತ್ರಗಳ ಪ್ರಸಾರದ ಆ್ಯಪ್‌ ‘ಹಾಟ್‌ಷಾಟ್‌’ನ್ನು ನಿಷೇಧಿಸಿದ ನಂತರ ಇನ್ನೊಂದು ಆ್ಯಪನ್ನು ರೂಪಿಸಲು ಕುಂದ್ರಾ ಚಿಂತನೆ ನಡೆಸಿದ್ದರು. ಕುಂದ್ರಾ ಅವರ ಪ್ಲ್ಯಾನ್‌ ‘ಬಿ’ ಕುರಿತು ಈಗ ಮಾಹಿತಿಗಳು ಹೊರಬರುತ್ತಿವೆ.

‘ಹಾಟ್‌ಷಾಟ್‌’ ಅಪ್ಲಿಕೇಷನ್‌ನ್ನು ನಿರ್ಬಂಧಿಸಿದ ಕಾರಣಕ್ಕೆ ಈ ಚಿತ್ರಗಳಿಗೆ ಪ್ರಸಾರ ವೇದಿಕೆಯೊಂದು ಬೇಕಿತ್ತು. ಅದಕ್ಕಾಗಿ ಅವರು ಹೊಸದೊಂದು ಆ್ಯಪ್‌ ರೂಪಿಸಿ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದ್ದರು ಎಂಬುದನ್ನು ಕುಂದ್ರಾ ಅವರು ತಮ್ಮ ಸಹವರ್ತಿಗಳೊಂದಿಗೆ ನಡೆಸಿದ ವಾಟ್ಸ್‌ಆ್ಯಪ್‌ ಚಾಟ್‌ ಬಹಿರಂಗಪಡಿಸಿವೆ. ‘ಎಚ್‌. ಅಕೌಂಟ್ಸ್‌’ ಹೆಸರಿನ ವಾಟ್ಸ್‌ಆ್ಯಪ್‌ ಗುಂಪಿನಲ್ಲಿ ಈ ಚರ್ಚೆಗಳು ನಡೆದಿವೆ.

ಪ್ಲಾನ್‌ ಬಿ ಏನಿತ್ತು?

ADVERTISEMENT

ಗೂಗಲ್‌ ಪ್ಲೇಸ್ಟೋರ್‌ನಲ್ಲಿ ‘ಹಾಟ್‌ಷಾಟ್‌’ ಅಪ್ಲಿಕೇಷನ್‌ನ ಸದ್ಯದ ಸ್ಥಿತಿ ತೋರಿಸುವ ಸ್ಕ್ರೀನ್‌ಷಾಟನ್ನು ವ್ಯಕ್ತಿಯೊಬ್ಬ ಈ ಗುಂಪಿನಲ್ಲಿ ಹಂಚಿಕೊಂಡಿದ್ದಾನೆ. ಆ ಆ್ಯಪನ್ನು ಗೂಗಲ್‌ ನಿರ್ಬಂಧಿಸಿತ್ತು. ‘ಇನ್ನು ಎರಡು ಮೂರು ವಾರಗಳಲ್ಲಿ ಹೊಸ ಅಪ್ಲಿಕೇಷನ್‌ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಲಭ್ಯ ಆಗಲಿದೆ. ಇದೊಂದು ತಮ್ಮ ಪಾಲಿಗೆ ಆಶೀರ್ವಾದ ಎಂಬಂತಾಗಿದೆ’ ಎಂದು ಕುಂದ್ರಾ ಹೇಳಿಕೊಂಡಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ ರಾಬ್‌ ಡಿಜಿಟಲ್‌ ಮಾರ್ಕೆಟಿಂಗ್‌ನ ಸದಸ್ಯನೊಬ್ಬ, ‘ಆ ಕೆಲಸ ಪೂರ್ಣಗೊಳ್ಳುವವರೆಗೆ ಹಾಟ್‌ಷಾಟ್‌ನಲ್ಲಿರುವ ತೀರಾ ಬೋಲ್ಡ್‌ ಚಿತ್ರಗಳನ್ನು ತೆಗೆದುಹಾಕೋಣ. ಬಿಎಫ್ (ಬಾಲಿಫೇಮ್) ಮುಗಿಯುವವರೆಗೆ ಎಚ್‌ಎಸ್ (ಹಾಟ್‌ಶಾಟ್‌ಗಳನ್ನು) ಉಳಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳೋಣ. ಅಪ್ಲಿಕೇಷನ್‌ನ ನಿರ್ಬಂಧ ತೆಗೆದುಹಾಕುವಂತೆ ಗೂಗಲ್‌ಗೆ ಮನವಿ ಮಾಡೋಣ’ ಎಂದು ಕೇಳಿದ್ದಾನೆ.

ಕಳೆದ ಅಕ್ಟೋಬರ್ 11ರಂದು, ‘ಎಚ್ ಅಕೌಂಟ್ಸ್’ ವಾಟ್ಸ್ ಆ್ಯಪ್‌ ಗ್ರೂಪ್‌ನ ಸದಸ್ಯರು ₹1.85 ಲಕ್ಷಗಳ ನೇರ ಆದಾಯ ಮತ್ತು ₹4.52 ಲಕ್ಷಗಳ ಚಲನಚಿತ್ರ ಮಾರಾಟದ ಬಗ್ಗೆ ಚರ್ಚಿಸಿದ್ದರು.

ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್‌ ಕುಂದ್ರಾ ಇಡೀ ಪ್ರಕರಣದಲ್ಲಿ ಪ್ರಧಾನ ಆರೋಪಿ. ಪ್ರಕರಣದಲ್ಲಿ ಇದುವರೆಗೆ 11 ಜನರು ಬಂಧನಕ್ಕೊಳಗಾಗಿದ್ದಾರೆ. ಕುಂದ್ರಾಗೆ ಜುಲೈ 23ರವರೆಗೆ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.