ADVERTISEMENT

ನಟ ಮಹೇಶ್‌ ಬಾಬು ಜೊತೆ ರಾಜಮೌಳಿ ಹೊಸ ಚಿತ್ರ: ಕತೆಗಾರ ವಿಜಯೇಂದ್ರ ಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 10 ಮೇ 2022, 6:34 IST
Last Updated 10 ಮೇ 2022, 6:34 IST
ಮಹೇಶ್‌ ಬಾಬು, ರಾಜಮೌಳಿ
ಮಹೇಶ್‌ ಬಾಬು, ರಾಜಮೌಳಿ   

ನಟ ಮಹೇಶ್‌ ಬಾಬು ಅಭಿನಯದ ಬಹುನಿರೀಕ್ಷಿತ ‘ಸರ್ಕಾರು ವಾರಿ ಪಾಟ’ ಸಿನಿಮಾ ಬಿಡುಗಡೆಗೆಸಿದ್ಧವಾಗಿರುವ ಬೆನ್ನಲ್ಲೇನಿರ್ದೇಶಕ ರಾಜಮೌಳಿ ಜೊತೆಗೆ ಮಹೇಶ್‌ ಬಾಬು ಹೊಸಸಿನಿಮಾ ಮಾಡಲಿದ್ದಾರೆ.

ಹೌದು, ಈ ಸಿನಿಮಾದ ಶೂಟಿಂಗ್‌ 2023ರಿಂದ ಆರಂಭವಾಗಲಿದೆ ಎಂದು ‘ಪಿಂಕ್‌ವಿಲ್ಲಾ‘ ವೆಬ್‌ಸೈಟ್‌ ವರದಿ ಮಾಡಿದೆ. ಇದೇ ಮಾಹಿತಿಯನ್ನು ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್‌ ಕೂಡ ಖಚಿತಪಡಿಸಿದ್ದಾರೆ.

ಇತ್ತೀಚೆಗೆ ‘ಪಿಂಕ್‌ವಿಲ್ಲಾ‘ಗೆ ನೀಡಿದ ಸಂದರ್ಶನದಲ್ಲಿ ವಿಜಯೇಂದ್ರ ಪ್ರಸಾದ್‌ ಅವರು,ರಾಜಮೌಳಿ ಅವರ ಹೊಸ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ರಾಜಮೌಳಿ 2023ರಲ್ಲಿ ಮಹೇಶ್‌ ಬಾಬು ಜೊತೆ ಸಿನಿಮಾ ಮಾಡುತ್ತಿದ್ದಾರೆ. ಇದರ ಚಿತ್ರಕತೆಯ ಕೆಲಸಗಳು ನಡೆಯುತ್ತಿದ್ದು ಈ ವರ್ಷಾಂತ್ಯಕ್ಕೆ ಮುಗಿಯಲಿವೆ ಎಂದು ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.

ADVERTISEMENT

ಕಾಡಿನ ಹಿನ್ನೆಲೆ ಇರುವ ಈ ಸಿನಿಮಾದ ಕತೆಯನ್ನು ನಾನೇ ಬರೆದಿದ್ದೇನೆ. ರಾಜಮೌಳಿ ಜೊತೆಯಲ್ಲಿ ಚಿತ್ರಕತೆ ಸಿದ್ದಪಡಿಸಲಾಗುತ್ತಿದೆ. ಇದೇ ವರ್ಷದಲ್ಲಿಮಹೇಶ್‌ ಬಾಬು ಅವರು ತ್ರಿವಿಕ್ರಮ ಶ್ರೀನಿವಾಸ್‌ ಜತೆ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರದ ಶೂಟಿಂಗ್‌ ಪೂರ್ಣಗೊಂಡ ಬಳಿಕ, 2023ರ ಜೂನ್‌–ಜುಲೈನಲ್ಲಿ ನಮ್ಮ ಸಿನಿಮಾದ ಶೂಟಿಂಗ್‌ ಆರಂಭವಾಗಲಿದೆ ಎಂದು ವಿಜಯೇಂದ್ರ ಪ್ರಸಾದ್‌ ಹೇಳಿದ್ದಾರೆ.

ಈ ಚಿತ್ರದ ಟೈಟಲ್‌ ಇನ್ನು ನಿಗದಿಯಾಗಿಲ್ಲ. ನಾಯಕ ನಟನನ್ನು ಮಾತ್ರ ಖಚಿತಪಡಿಸಲಾಗಿದೆ. ಉಳಿದಂತೆ ತಾಂತ್ರಿಕ ಹಾಗೂ ಇತರೆಪಾತ್ರವರ್ಗಗಳ ಆಯ್ಕೆ ಪ್ರಕ್ರಿಯೆಯೂಇದೇ ವರ್ಷ ನಡೆಯಲಿದೆ ಎಂದು ಅವರುಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.