ADVERTISEMENT

35 ವರ್ಷಗಳ ನಂತರ ಒಟ್ಟಿಗೆ ನಟಿಸಲಿದ್ದಾರೆ ರಜನಿ– ಕಮಲ್‌

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 19:30 IST
Last Updated 10 ಡಿಸೆಂಬರ್ 2019, 19:30 IST
ಕಮಲಹಾಸನ್‌–ರಜನೀಕಾಂತ್‌
ಕಮಲಹಾಸನ್‌–ರಜನೀಕಾಂತ್‌   

35 ವರ್ಷಗಳ ನಂತರ ನಟರಾದ ರಜನಿಕಾಂತ್‌ ಹಾಗೂ ಕಮಲಹಾಸನ್‌ ಒಂದೇ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ.

ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ಕಮಲ ಹಾಸನ್‌ ಹಾಗೂ ರಜನಿಕಾಂತ್‌ಸುಮಾರು 16 ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು. ಈ ಇಬ್ಬರು ಶ್ರೇಷ್ಠ ನಟರು 1985ರಲ್ಲಿ ಬಿಡುಗಡೆಯಾದ ‘ಗಿರಫ್ತಾರ್‌’ ಚಿತ್ರದಲ್ಲಿ ನಟಿಸಿದ್ದರು. ಇದೇ ಇವರಿಬ್ಬರು ಜೊತೆಯಾಗಿ ನಟಿಸಿದ ಕೊನೆಯ ಚಿತ್ರ. ಆಚಿತ್ರದಲ್ಲಿ ಅಮಿತಾಭ್‌ ಬಚ್ಚನ್‌ ಜೊತೆ ತೆರೆ ಹಂಚಿಕೊಂಡಿದ್ದರು.

ಈಗ ಇವರಿಬ್ಬರು ಮತ್ತೆ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ನಿರ್ದೇಶಕ ಲೋಕೇಶ್‌ ಕನಕರಾಜ್‌ ಅವರು ತಮ್ಮ ಮುಂದಿನ ಚಿತ್ರದಲ್ಲಿ ಈ ಇಬ್ಬರು ನಟರನ್ನು ಒಟ್ಟಿಗೆ ತೋರಿಸಲಿದ್ದಾರೆ. ಸುಮಾರು ಮೂರು ದಶಕಗಳ ನಂತರ ಇವರಿಬ್ಬರು ಒಟ್ಟಿಗೆ ನಟಿಸುತ್ತಿರುವುದು.

ADVERTISEMENT

ಕನಕರಾಜ್‌, ಕಮಲ ಹಾಸನ್‌ ಪ್ರೊಡಕ್ಷನ್‌ ಹೌಸ್‌ನ ಹೊಸ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಈ ಚಿತ್ರಕ್ಕಾಗಿ ಇತ್ತೀಚೆಗೆ ರಜನಿಕಾಂತ್‌ ಜೊತೆ ಕನಕರಾಜ್‌ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಮಾತುಕತೆ ಸಂದರ್ಭದಲ್ಲಿ ಈಚೆಗೆ ಬಿಡುಗಡೆಯಾಗಿದ್ದ ‘ಕೈದಿ’ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಜನಿಕಾಂತ್‌ ಆ ಚಿತ್ರ ಬಾಕ್ಸಾಫೀಸಿನಲ್ಲಿ ಯಶಸ್ಸು ಗಳಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದರು.
ಅದೇ ವೇಳೆ ಈ ಹೊಸ ಚಿತ್ರದ ಬಗ್ಗೆ ಚರ್ಚೆ ಕೂಡ ನಡೆಸಿದ್ದರು.

ಕಮಲಹಾಸನ್‌ ಹಾಗೂ ರಜನಿಕಾಂತ್‌ ಇಬ್ಬರನ್ನೂ ಈ ಚಿತ್ರದಲ್ಲಿ ನಟಿಸುವಂತೆ ಕನಕರಾಜ್‌ ಮನವೊಲಿಸಿದ್ದಾರೆ ಎಂದು ಸುದ್ದಿ ಇದೆ.ಈ ಚಿತ್ರದ ಚಿತ್ರೀಕರಣ ಹೊಸ ವರ್ಷದಲ್ಲಿ ಆರಂಭವಾಗಲಿದೆ.

ಕಮಲ ಹಾಸನ್‌ ‘ಇಂಡಿಯನ್‌ 2’ ಚಿತ್ರೀಕರಣದಲ್ಲಿ ಹಾಗೂ ರಜನಿಕಾಂತ್‌, ಸಿರುತೈ ಶಿವ ನಿರ್ದೇಶನದ ಹೊಸ ಚಿತ್ರದ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಲೋಕೇಶ್‌ ಕನಕರಾಜ್‌ ಅವರು ‘ದಳಪತಿ 64’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.