ADVERTISEMENT

'ಕೂಲಿ' ಚಿತ್ರಕ್ಕಾಗಿ ಸೂಪರ್‌ ಸ್ಟಾರ್‌ ರಜನಿಕಾಂತ್ ಪಡೆದ ಸಂಭಾವನೆ ಎಷ್ಟು?

ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ ಕೂಲಿ ಚಿತ್ರ ಬಿಡುಗಡೆಗೂ ಮುನ್ನವೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಚಿತ್ರದ ಪಾತ್ರವರ್ಗ ಮತ್ತು ಅವರ ಸಂಭಾವನೆ ಇಲ್ಲಿದೆ..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಆಗಸ್ಟ್ 2025, 2:41 IST
Last Updated 12 ಆಗಸ್ಟ್ 2025, 2:41 IST
<div class="paragraphs"><p>ಸೂಪರ್‌ ಸ್ಟಾರ್‌ ರಜನಿಕಾಂತ್‌ ಮುಟ್ಟಿದೆಲ್ಲವೂ ಚಿನ್ನ.&nbsp;ವಿಭಿನ್ನ ಮ್ಯಾನರಿಸಂನಿಂದ ತಮ್ಮ ಅಭಿಮಾನಿಗಳನ್ನು ರಂಜಿಸುವ ರಜನಿ ಅವರ ಸ್ಟೈಲೇ ಬೇರೆ.&nbsp; ₹350 ಕೋಟಿ ಬಿಗ್‌ ಬಜೆಟ್‌ ಚಿತ್ರ ಕೂಲಿ, ಬಿಡುಗಡೆಗೂ ಮುನ್ನವೇ ಜಾಗತಿಕವಾಗಿ ₹200 ಕೋಟಿ ಲಾಭ ಗಳಿಸಿದೆ ಎಂದು ವರದಿಯಾಗಿದೆ. ಪಾತ್ರವರ್ಗ ಹಾಗೂ ಅವರ ಸಂಭಾವನೆ ನೋಡುವುದಾದರೆ..</p></div>

ಸೂಪರ್‌ ಸ್ಟಾರ್‌ ರಜನಿಕಾಂತ್‌ ಮುಟ್ಟಿದೆಲ್ಲವೂ ಚಿನ್ನ. ವಿಭಿನ್ನ ಮ್ಯಾನರಿಸಂನಿಂದ ತಮ್ಮ ಅಭಿಮಾನಿಗಳನ್ನು ರಂಜಿಸುವ ರಜನಿ ಅವರ ಸ್ಟೈಲೇ ಬೇರೆ.  ₹350 ಕೋಟಿ ಬಿಗ್‌ ಬಜೆಟ್‌ ಚಿತ್ರ ಕೂಲಿ, ಬಿಡುಗಡೆಗೂ ಮುನ್ನವೇ ಜಾಗತಿಕವಾಗಿ ₹200 ಕೋಟಿ ಲಾಭ ಗಳಿಸಿದೆ ಎಂದು ವರದಿಯಾಗಿದೆ. ಪಾತ್ರವರ್ಗ ಹಾಗೂ ಅವರ ಸಂಭಾವನೆ ನೋಡುವುದಾದರೆ..

   

ಕೃಪೆ: ಸನ್‌ ಪಿಕ್ಚರ್ಸ್‌

1 ದೇವ ಪಾತ್ರದಲ್ಲಿ ರಜನಿಕಾಂತ್‌

ಕೂಲಿ ಚಿತ್ರದಲ್ಲಿ ರಜನಿ ದೇವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಮೊದಲ ದಿನವೇ ಅನೇಕ ದಾಖಲೆಗಳು ಸೃಷ್ಟಿಯಾಗಲಿವೆ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ನಟಿಸಲು ಬರೋಬ್ಬರಿ ₹200 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ADVERTISEMENT

2. ನಿರ್ದೇಶಕ ಲೋಕೇಶ್‌ ಕನಕರಾಜ್

ನಿರ್ದೇಶಕ ಕನಗರಾಜ್ ಅವರು  ಈ ಚಿತ್ರಕ್ಕೆ ಆ್ಯಕ್ಷನ್ ಹೇಳಿದ್ದು ₹ 50 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ

3. ದಹಾ ಪಾತ್ರದಲ್ಲಿ ಬಾಲಿವುಡ್‌ ನಟ ಅಮೀರ್‌ ಖಾನ್‌

ಕೂಲಿ ಚಿತ್ರದಲ್ಲಿ ದರೋಡೆಕೋರನ ಪಾತ್ರದಲ್ಲಿ ನಟ ಅಮೀರ್‌ಖಾನ್ ಕಾಣಿಸಿಕೊಂಡಿದ್ದು, 15 ನಿಮಿಷಗಳ ಪಾತ್ರಕ್ಕಾಗಿ ಬರೋಬ್ಬರಿ ₹20 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ

4. ಸಂಗೀತ ಸಂಯೋಜಕ ಅನಿರುದ್ಧ್‌ ರವಿಚಂದರ್‌

ಈ ಚಿತ್ರಕ್ಕೆ ಅನಿರುದ್ಧ್‌ ರವಿಚಂದರ್‌ ಸಂಗೀತ ಸಂಯೋಜನೆ ಇದ್ದು, ಬರೋಬ್ಬರಿ ₹50 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

5. ಸೈಮನ್‌ ಪಾತ್ರದಲ್ಲಿ ನಾಗರ್ಜುನ

ಈ ಚಿತ್ರದಲ್ಲಿ ನಾಗರ್ಜುನ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ₹10 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

6. ರಾಜಶೇಖರ್‌ ಪಾತ್ರದಲ್ಲಿ ಸತ್ಯರಾಜ್ ( ಬಾಹುಬಲಿ ಕಟ್ಟಪ್ಪ)

ಚಿತ್ರದಲ್ಲಿ ರಾಜಶೇಖರ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ನಟ ಸತ್ಯರಾಜ್ ಅವರು ₹5 ಕೋಟಿ ಸಂಭಾವನೆ ಪಡೆದಿದ್ದಾರೆ.

7 ಕಲೀಶ ಪಾತ್ರದಲ್ಲಿ ನಟ ಉಪೇಂದ್ರ

ಚಿತ್ರದಲ್ಲಿ ಉಪೇಂದ್ರ ಅವರು ಕಲೀಶ  ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕನ್ನಡದ ನಟ ಉಪೇಂದ್ರ ₹4 ಕೋಟಿ ಸಂಭಾವನೆ ಪಡೆದಿದ್ದಾರೆ.

8. ಪ್ರೀತಿ ಪಾತ್ರದಲ್ಲಿ ಶ್ರುತಿ ಹಾಸನ್‌

ಈ ಚಿತ್ರದಲ್ಲಿ ನಟಿ ಶ್ರುತಿ ಹಾಸನ್‌, ಪ್ರೀತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ₹4 ಕೋಟಿ ಸಂಭಾವನೆ ಪಡಿದ್ದಾರೆ ಎನ್ನಲಾಗಿದೆ.

9. ಮೋನಿಕಾ ಪಾತ್ರದಲ್ಲಿ ಪೂಜಾ ಹೆಗ್ಡೆ

ಪೂಜಾ ಹೆಗ್ಡೆ ಅವರು ಈ ಚಿತ್ರಕ್ಕಾಗಿ  ₹3 ಕೋಟಿ ಸಂಭಾವನೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.