ADVERTISEMENT

ಚಂಡೀಗಡದಲ್ಲಿ ಪತ್ರಲೇಖಾರನ್ನು ಮದುವೆಯಾಗಲಿದ್ದಾರೆ ರಾಜ್‌ಕುಮಾರ್ ರಾವ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ನವೆಂಬರ್ 2021, 7:39 IST
Last Updated 10 ನವೆಂಬರ್ 2021, 7:39 IST
ರಾಜ್‌ಕುಮಾರ್ ರಾವ್ ತಮ್ಮ ಬಹುಕಾಲದ ಗೆಳತಿ ಜತೆಗೆ ಮದುವೆಗೆ ಸಜ್ಜಾಗಿದ್ದಾರೆ.
ರಾಜ್‌ಕುಮಾರ್ ರಾವ್ ತಮ್ಮ ಬಹುಕಾಲದ ಗೆಳತಿ ಜತೆಗೆ ಮದುವೆಗೆ ಸಜ್ಜಾಗಿದ್ದಾರೆ.   

ಬೆಂಗಳೂರು: ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಅವರು ತಮ್ಮ ಬಹುಕಾಲದ ಗೆಳತಿ ಪತ್ರಲೇಖಾರನ್ನು ಚಂಡೀಗಡದಲ್ಲಿ ವಿವಾಹವಾಗುತ್ತಿದ್ದಾರೆ.

ಕುಟುಂಬದ ಆಪ್ತರು ಮತ್ತು ಬಾಲಿವುಡ್‌ನ ಗೆಳೆಯರು, ಬಂಧುಗಳ ಸಮ್ಮುಖದಲ್ಲಿ ರಾಜ್‌ಕುಮಾರ್-ಪತ್ರಲೇಖಾ ಅವರ ಮದುವೆ ನಡೆಯಲಿದೆ ಎಂದು ಇಂಗ್ಲಿಷ್ ದೈನಿಕ ವರದಿ ಮಾಡಿದೆ.

ಬಾಲಿವುಡ್‌ನ ತಾರಾ ದಂಪತಿ ತಮ್ಮ ಮದುವೆಯನ್ನು ತೀರಾ ಆಪ್ತರ ಸಮಕ್ಷಮದಲ್ಲಿ ಖಾಸಗಿಯಾಗಿ ನಡೆಸಲು ಮುಂದಾಗಿದ್ದಾರೆ. ಹೀಗಾಗಿ ಕೆಲವೇ ಸಂಖ್ಯೆಯ ಅತಿಥಿಗಳು ಮಾತ್ರವೇ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ವರದಿ ಹೇಳಿದೆ.

ADVERTISEMENT

ಜಾಹೀರಾತು ಒಂದರಲ್ಲಿ ಪತ್ರಲೇಖಾ ಅವರನ್ನು ನೋಡಿದ್ದ ರಾಜ್‌ಕುಮಾರ್, ನಿಜಜೀವನದಲ್ಲಿ ನಟಿಯನ್ನು ಭೇಟಿಯಾಗು ಬಯಸಿದ್ದರು. ಅದಾದ ಒಂದು ತಿಂಗಳ ಬಳಿಕ, ರಾಜ್‌ಕುಮಾರ್ ಪತ್ರಲೇಖಾರನ್ನು ಭೇಟಿಯಾಗಿದ್ದರು.

ರಾಜ್‌ಕುಮಾರ್ ಮತ್ತು ಪತ್ರಲೇಖಾ ಕಳೆದ ಏಳು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. 2014ರಲ್ಲಿ ‘ಸಿಟಿಲೈಟ್ಸ್’ ಬಾಲಿವುಡ್ ಚಿತ್ರದಲ್ಲಿ ಇಬ್ಬರೂ ಜತೆಯಾಗಿ ಕಾಣಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.