ADVERTISEMENT

#MeToo: ರಾಖಿ ಕೊರಳಿಗೆ ಕಾನೂನು ಉರುಳು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 11:35 IST
Last Updated 22 ಅಕ್ಟೋಬರ್ 2018, 11:35 IST
ರಾಖಿ ಸಾವಂತ್‌
ರಾಖಿ ಸಾವಂತ್‌   

‘ಈ ಹತ್ತು ವರ್ಷಗಳಲ್ಲಿ ಕೋಮಾದಲ್ಲಿದ್ದೆಯಾ’ ಎಂದು ತನುಶ್ರೀ ದತ್ತಾವಿರುದ್ಧಕುಹಕವಾಡಿದ ಬಾಲಿವುಡ್‌ನ ವಿವಾದಿತ ನಟಿ ರಾಖಿ ಸಾವಂತ್‌ ಕೊರಳಿಗೆ ಕಾನೂನಿನ ಉರುಳು ಸುತ್ತಿಕೊಳ್ಳುವ ಸಂಭವವಿದೆ.

‘ಹಾರ್ನ್‌ ಓಕೆ ಪ್ಲೀಸ್‌’ ಚಿತ್ರದ ಸೆಟ್‌ನಲ್ಲಿ ತಮಗೆ ನಾನಾ ಪಾಟೇಕರ್‌ ಲೈಂಗಿಕ ಕಿರುಕುಳ ನೀಡಿದ್ದರು ಎಂದು ತನುಶ್ರೀ ಮಾಡಿದ್ದ ಆರೋಪಕ್ಕೆ ರಾಖಿ ಸಾವಂತ್‌ ಕೆಲದಿನಗಳ ಹಿಂದೆ ಪ್ರತಿಕ್ರಿಯಿಸಿದ್ದರು. ‘ತನುಶ್ರೀ ದತ್ತ ಮತ್ತು ನಾನಾ ಪಾಟೇಕರ್‌ ‘ಹಾರ್ನ್‌ ಓಕೆ ಪ್ಲೀಸ್‌’ ಚಿತ್ರದಲ್ಲಿ ನಟಿಸಿ ಒಂಬತ್ತು ವರ್ಷಗಳೇ ಕಳೆದಿವೆ. ಈಗ ಪಾಟೇಕರ್‌ ವಿರುದ್ಧ ಆರೋಪ ಮಾಡುವುದರಲ್ಲಿ ಅರ್ಥವೇನಿದೆ, ಇಷ್ಟು ವರ್ಷ ಆಕೆ ಕೋಮಾದಲ್ಲಿದ್ದಳೇ?’ ಎಂದು ರಾಖಿ ಕಟುವಾಗಿ ಪ್ರಶ್ನಿಸಿದ್ದರು.

ಅಲ್ಲದೆ, ‘ತನುಶ್ರೀಗೆ ತಲೆ ಕೆಟ್ಟಿದೆ. ಕೈಯಲ್ಲಿದ್ದ ದುಡ್ಡೆಲ್ಲಾ ಖಾಲಿಯಾಗಿದೆ. ಈಗ ದುಡ್ಡು ಮತ್ತು ಪ್ರಚಾರಕ್ಕಾಗಿ ಈ ರೀತಿಯೆಲ್ಲಾ ಮಾತನಾಡುತ್ತಿದ್ದಾಳೆ’ ಎಂದೂ, ಸುದ್ದಿಗೋಷ್ಠಿಯಲ್ಲಿ ರಾಖಿ ಟೀಕಿಸಿದ್ದರು.

ADVERTISEMENT

ಇದರಿಂದ ಕ್ರುದ್ಧರಾಗಿರುವ ತನುಶ್ರೀ, ರಾಖಿ ವಿರುದ್ಧ ₹ 10 ಕೋಟಿಯ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ‘ನಾನಾ ಪಾಟೇಕರ್‌, ಗಣೇಶ್‌ ಆಚಾರ್ಯ ಸೇರಿದಂತೆ ನಾಲ್ವರ ವಿರುದ್ಧ ಈಗಾಗಲೇ ಮೊಕದ್ದಮೆ ಹೂಡಲಾಗಿದೆ. ಇದೀಗರಾಖಿ ಸಾವಂತ್‌ ವಿರುದ್ಧ ಮೊಕದ್ದಮೆ ಹೂಡಿದ್ದೇವೆ’ ಎಂದು ತನುಶ್ರೀ ವಕೀಲ ನಿತಿನ್‌ ಸತ್ಪುತೆ ಸ್ಪಷ್ಟಪಡಿಸಿದ್ದಾರೆ.

ಸದಾ ವಿವಾದಿತ ಹೇಳಿಕೆ ಮತ್ತು ವರ್ತನೆಗಳಿಂದ ಸುದ್ದಿಯಾಗುವ ರಾಖಿ ಸಾವಂತ್‌ ಇದೀಗ ನಾನಾ ಪಾಟೇಕರ್‌ಗೆ ಬೆಂಬಲ ಪ್ರಕಟಿಸುವ ಭರದಲ್ಲಿ ಕಾನೂನು ಸಮರ ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಇನ್ನಷ್ಟು ಓದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.