ADVERTISEMENT

ಹೆಣ್ಣು ಮಗುವಿಗೆ ತಂದೆಯಾದ ರಾಮ್‌ ಚರಣ್‌ ತೇಜಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಜೂನ್ 2023, 2:47 IST
Last Updated 20 ಜೂನ್ 2023, 2:47 IST
ರಾಮ್‌ ಚರಣ್‌ ತೇಜಾ ಮತ್ತು ಉಪಾಸನಾ ಕೊನಿಡೇಲಾ
ರಾಮ್‌ ಚರಣ್‌ ತೇಜಾ ಮತ್ತು ಉಪಾಸನಾ ಕೊನಿಡೇಲಾ    

ಹೈದರಾಬಾದ್‌: ತೆಲುಗು ನಟ ರಾಮ್‌ ಚರಣ್‌ ತೇಜಾ, ಪತ್ನಿ ಉಪಾಸನಾ ಕೊನಿಡೇಲಾ ಅವರಿಗೆ ಹೆಣ್ಣು ಮಗು ಜನಿಸಿದೆ. ಇಂದು ಬೆಳಿಗ್ಗೆ(ಮಂಗಳವಾರ) ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

‘ಉಪಾಸನಾ ಕೊನಿಡೇಲಾ ಅವರು 20 ಜೂನ್ 2023ರಂದು ಹೈದರಾಬಾದ್‌ ಅಪೋಲೋ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದೆ‘ ಎಂದು ಆಸ್ಪತ್ರೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಡಿಸೆಂಬರ್‌ 2022ರಂದು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿಯನ್ನು ರಾಮ್‌ ಚರಣ್‌ ತೇಜಾ ಹಂಚಿಕೊಂಡಿದ್ದರು. ಶ್ರೀ ಹನುಮಾನ್‌ ದೇವರ ಆರ್ಶೀವಾದದಿಂದ ನಾವು ಪೋಷಕರಾಗುತ್ತಿದ್ದೇವೆ ಎಂದು ಟ್ವೀಟ್‌ ಮಾಡಿದ್ದರು.

ADVERTISEMENT

ಮದುವೆಯಾಗಿ ಹಲವು ವರ್ಷಗಳು ಕಳೆದರೂ ಮಗು ಪಡೆಯದೇ ಇರುವುದರ ಬಗ್ಗೆ ಉಪಾಸನಾ ಹಲವು ಪ್ರಶ್ನೆಗಳನ್ನು ಎದುರಿಸಿದ್ದರು. ‘ಮಗು ಪಡೆಯುವುದು ಬಿಡುವುದು ಅವರವರ ವೈಯಕ್ತಿಕ ವಿಷಯ‘ ಎಂದು ದಿಟ್ಟವಾಗಿ ಉತ್ತರಿಸಿದ್ದರು.

ರಾಮ್‌ ಚರಣ್‌ ತೇಜಾ ತಮ್ಮ ಮುಂದಿನ ಚಿತ್ರ ‘ಗೇಮ್ ಚೆಂಜರ್‘ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ಶಂಕರ್‌ ನಿರ್ದೇಶಿಸುತ್ತಿದ್ದು, ಕಿಯಾರಾ ಅಡ್ವಾಣಿ ಚಿತ್ರದ ನಾಯಕಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.