ADVERTISEMENT

’ಅಪ್ಪು’ ಸಮಾಧಿಗೆ ಪೂಜೆ ಸಲ್ಲಿಸಿದ ನಿರ್ದೇಶಕ ‘ರಾಮ್‌ ಗೋಪಾಲ್‌ ವರ್ಮಾ‘

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2022, 7:51 IST
Last Updated 29 ಮಾರ್ಚ್ 2022, 7:51 IST
’ಅಪ್ಪು’ ಸಮಾಧಿ ಬಳಿ ರಾಮ್‌ ಗೋಪಾಲ್‌ ವರ್ಮಾ
’ಅಪ್ಪು’ ಸಮಾಧಿ ಬಳಿ ರಾಮ್‌ ಗೋಪಾಲ್‌ ವರ್ಮಾ   

ಟಾಲಿವುಡ್‌ ಹಾಗೂ ಬಾಲಿವುಡ್‌ನ ವಿವಾದಿತ ನಿರ್ದೇಶಕ ಎಂದೇ ಖ್ಯಾತರಾಗಿರುವ ರಾಮ್‌ ಗೋಪಾಲ್‌ ವರ್ಮಾ ಮಂಗಳವಾರ ಅಪ್ಪು ಸಮಾಧಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

ವರ್ಮಾ ಅವರು, ಪುನೀತ್ ಅವರ ಅಂತಿಮ ದರ್ಶನ ಪಡೆದಿರಲಿಲ್ಲ. ಇದೀಗ ಬೆಂಗಳೂರಿಗೆ ಬಂದಿರುವ ಅವರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ವರ್ಮಾ ಜೊತೆ ನಟಿ ಅಪ್ಸರಾ ರಾಣಿ ಕೂಡ ಇದ್ದರು. ಅವರೂ ಅಪ್ಪುಸಮಾಧಿಗೆ ನಮನ ಸಲ್ಲಿಸಿದ್ದಾರೆ.

ಪುನೀತ್ ರಾಜ್‌ಕುಮಾರ್ ನಿಧನರಾಗಿ ಇಂದಿಗೆ 5 ತಿಂಗಳು ಕಳೆದಿದ್ದು, ಕುಟುಂಬ ಸದಸ್ಯರು ಪೂಜೆ ಸಲ್ಲಿಸಲು ಅಪ್ಪು ಸಮಾಧಿ ಇರುವಕಂಠೀರವ ಸ್ಟುಡಿಯೋಗೆ ಆಗಮಿಸಿದ್ದರು. ಇದೇ ವೇಳೆ ವರ್ಮಾ ಅವರುರಾಘವೇಂದ್ರ ರಾಜ್‌ಕುಮಾರ್ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ADVERTISEMENT

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ವಂದಿತಾ ರಾಘವೇಂದ್ರ ರಾಜ್‌ಕುಮಾರ್‌ ಸೇರಿದಂತೆ ಕುಟುಂಬಸ್ಥರು ‘ಅಪ್ಪು ಸಮಾಧಿ‘ಗೆ ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.