ADVERTISEMENT

ರಣಬೀರ್‌–ಶ್ರದ್ಧಾ ಕಪೂರ್‌ ಜೋಡಿಯ‘ತು ಝೂಠೀ ಮೈ ಮಕ್ಕಾರ್‌’ಪೋಸ್ಟರ್‌ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಡಿಸೆಂಬರ್ 2022, 13:28 IST
Last Updated 14 ಡಿಸೆಂಬರ್ 2022, 13:28 IST
   

ರಣಬೀರ್‌–ಶ್ರದ್ಧಾ ಕಪೂರ್‌ ಮೊದಲ ಸಲ ಜೊತೆಯಾಗಿ ಅಭಿನಯಿಸಿರುವ, ಲವ್‌ ರಂಜನ್‌ ನಿರ್ದೇಶನದ ಬಹು ನಿರೀಕ್ಚಿತ ಚಿತ್ರದ ಪೋಸ್ಟರ್‌ ಮತ್ತು ಫಸ್ಟ್‌ಲುಕ್‌ ಬಿಡುಗಡೆಗೊಂಡಿದೆ. ಚಿತ್ರಕ್ಕೆ ‘ತು ಝೂಠೀ ಮೈ ಮಕ್ಕಾರ್‌’ಎಂದು ಹೆಸರಿಡಲಾಗಿದ್ದು, ಟೀಸರ್‌ನಲ್ಲಿ ರಣಬೀರ್‌ ಹಾಗೂ ಶ್ರದ್ಧಾ ಜೋಡಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

‘ಪ್ಯಾರ್‌ ಕ ಪಂಚ್‌ನಾಮ್‌’, ‘ಸೋನು ಕೆ ಟಿಟು ಕಿ ಸ್ವೀಟಿ’ನಂತಹ ವಿಭಿನ್ನ ಪ್ರೇಮಕಥೆಗಳನ್ನು ನೀಡಿದ್ದ ರಂಜನ್‌, ಮತ್ತೊಂದು ಕ್ಯೂಟ್‌ ಲವ್‌ಸ್ಟೋರಿಯೊಂದಿಗೆ ಬಂದಿರುವುದು ಖಾತ್ರಿಯಾಗಿದೆ.

ರಣಬೀರ್‌ ಪ್ಲೇಬಾಯ್‌ ಪಾತ್ರದಲ್ಲಿರುವಂತೆ ಕಾಣುತ್ತದೆ. ಶ್ರದ್ಧಾ ಆತನ ಬಲೆಗೆ ಬೀಳುವ ಮುದ್ದಾದ ಹುಡುಗಿ. ಫ್ಲೈಯಿಂಗ್‌ ಕಿಸ್‌ನೊಂದಿಗೆ ತನ್ನದೇ ಆದ ಶೈಲಿಯಲ್ಲಿ ಶ್ರದ್ಧಾಳನ್ನು ಆಕರ್ಷಿಸುವ ರಣಬೀರ್‌, ಕೊನೆಯಲ್ಲಿ ಶ್ರದ್ಧಾ ಬಳಿ ಬರುತ್ತಾರೆ ಎಂಬುದನ್ನು ಟೀಸರ್‌ನಲ್ಲಿ ಸೂಚ್ಯವಾಗಿ ಹೇಳಿದ್ದಾರೆ. ಆದರೆ ಚಿತ್ರದ ಕಥೆಯ ಕುರಿತು ಹೆಚ್ಚು ಬಿಟ್ಟುಕೊಟ್ಟಿಲ್ಲ. ಬದಲಿಗೆ ಸಿನಿಮಾದಲ್ಲಿ ಇಬ್ಬರು ಹೇಗೆ ಕಾಣಿಸುತ್ತಾರೆ ಎಂಬ ಕುರಿತು ಪ್ರೇಕ್ಷಕರಿಗೆ ತೋರಿಸಿಕೊಟ್ಟಿದ್ದಾರೆ.

ADVERTISEMENT

ವಯಸ್ಸಾಗುತ್ತಿರುವುದರಿಂದ ಇದು ತಮ್ಮ ಕೊನೆಯ ರಾಮ್‌ಕಾಮ್‌ ಸಿನಿಮಾ ಇರಬಹುದು ಎಂದುಈ ಹಿಂದೆ ರಣಬೀರ್‌ ಹೇಳಿದ್ದರು. ರಣಬೀರ್‌ ಪತ್ನಿ ಆಲಿಯಾ ಭಟ್‌ ಇತ್ತೀಚೆಗಷ್ಟೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.