ADVERTISEMENT

ಅಲಿಯಾ ‘ಬೇಬಿ ಬಂಪ್‌’ ಹಾಸ್ಯಮಾಡಿ ಕ್ಷಮೆಯಾಚಿಸಿದ ರಣಬೀರ್‌

ಪಿಟಿಐ
Published 24 ಆಗಸ್ಟ್ 2022, 19:45 IST
Last Updated 24 ಆಗಸ್ಟ್ 2022, 19:45 IST
ರಣಬೀರ್‌ ಕಪೂರ್‌ ಮತ್ತು ಅಲಿಯಾ ಭಟ್‌
ರಣಬೀರ್‌ ಕಪೂರ್‌ ಮತ್ತು ಅಲಿಯಾ ಭಟ್‌   

ಚೆನ್ನೈ :ಗರ್ಭಿಣಿಯಾದ ತಮ್ಮ ಪತ್ನಿ ಮತ್ತು ನಟಿಅಲಿಯಾ ಭಟ್‌ ಅವರ ದೇಹ ತೂಕ ಹೆಚ್ಚಳದ ಬಗ್ಗೆ ಕಿಚಾಯಿಸಿದ್ದ ಬಾಲಿವುಡ್‌ ನಟ ರಣಬೀರ್‌ ತಮ್ಮ ತಪ್ಪಿನ ಅರಿವಾಗಿ ಬುಧವಾರ ಕ್ಷಮೆಯಾಚಿಸಿದ್ದಾರೆ.

‘ಆ ಕಮೆಂಟ್‌ ಜೋಕ್‌ ಅಷ್ಟೇ ಆಗಿತ್ತು. ಆದರೆ, ಅದು ತಮಾಶೆಯಾಗಲಿಲ್ಲ. ನನ್ನ ಜೋಕ್‌ ಯಾರನ್ನೂ ನೋಯಿಸುವ ಉದ್ದೇಶದ್ದಾಗಿರಲಿಲ್ಲ. ಇದು ನನ್ನ ಕೆಟ್ಟ ಹಾಸ್ಯಪ್ರಜ್ಞೆ’ ಎಂದುರಣಬೀರ್‌ ಕಪೂರ್‌ ತಮ್ಮ ನಟನೆಯ ‘ಬ್ರಹ್ಮಾಸ್ತ್ರ: ಪಾರ್ಟ್ ಒನ್ ಶಿವ’ ಚಿತ್ರದ ಪ್ರಚಾರ ಕಾರ್ಯಕ್ರಮದ ಆನ್‌ಲೈನ್‌ ಸಂವಾದದಲ್ಲಿ ಪ್ರತಿಕ್ರಿಯಿಸಿದ್ದಾರೆ.

‘ನನ್ನ ಪತ್ನಿಯನ್ನು ನನ್ನ ಬದುಕಿನ ಎಲ್ಲ ಸಮಯದಲ್ಲೂ, ಎಲ್ಲ ವಿಷಯದಲ್ಲೂ ಪ್ರೀತಿಸುತ್ತೇನೆ. ಆ ದಿನ ಮಾಡಿದ ಕಮೆಂಟ್‌ ಬಗ್ಗೆ ಆಲಿಯಾ ಜತೆ ಮಾತನಾಡಿದೆ. ಆಕೆ ಅದನ್ನು ಮನಸಿಗೆ ತೆಗೆದುಕೊಂಡಿಲ್ಲ, ಆಕೆಅದಕ್ಕೆ ನಿಜವಾಗಿಯೂ ನಕ್ಕಳು. ಆದರೆ, ನನಗೆ ಕೆಟ್ಟ ಹಾಸ್ಯ ಪ್ರಜ್ಞೆ ಇದೆ. ಕೆಲವೊಮ್ಮೆ ಅದು ನನ್ನ ಮುಖಕ್ಕೆ ಬಡಿಯುತ್ತೆ. ಈ ಬಗ್ಗೆ ನಾನು ಯಾರಿಗಾದರೂ ನೋವುಂಟು ಮಾಡಿದ್ದರೆ ಕ್ಷಮಿಸಿ’ ಎಂದು ನಟ ರಣಬೀರ್‌ ವಿನಂತಿಸಿದ್ದಾರೆ.

ADVERTISEMENT

‘ಬ್ರಹ್ಮಾಸ್ತ್ರ: ಪಾರ್ಟ್ ಒನ್ ಶಿವ’ ಚಿತ್ರದ ಪ್ರಚಾರದ ಭಾಗವಾಗಿಇತ್ತೀಚೆಗೆ ಅಲಿಯಾ ಭಟ್ ಅವರೊಂದಿಗಿನ ಇನ್‌ಸ್ಟಾಗ್ರಾಮ್‌ ಲೈವ್‌ ಕಾರ್ಯಕ್ರಮದಲ್ಲಿ ರಣಬೀರ್‌ ಕಪೂರ್, ಪತ್ನಿಯ ಬೇಬಿ ಬಂಪ್‌ ಬಗ್ಗೆ ಮಾಡಿದ ಕಮೆಂಟ್‌ಗೆ ನೆಟ್ಟಿಗರಿಂದ ತೀವ್ರ ಟೀಕೆಗೆ ಒಳಗಾಗಿದ್ದರು. ಈ ಚಿತ್ರದಲ್ಲಿ ರಣಬೀರ್‌ ಮತ್ತು ಅಲಿಯಾ ಜತೆಯಾಗಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.