ADVERTISEMENT

ಹಿರಿಯ ನಟ ರಣಧೀರ್‌ ಕಪೂರ್‌ಗೆ ಕೋವಿಡ್‌ ದೃಢ

ಪಿಟಿಐ
Published 29 ಏಪ್ರಿಲ್ 2021, 16:13 IST
Last Updated 29 ಏಪ್ರಿಲ್ 2021, 16:13 IST
ರಣಧೀರ್‌ ಕಪೂರ್
ರಣಧೀರ್‌ ಕಪೂರ್   

ಮುಂಬೈ: ಬಾಲಿವುಡ್‌ನ ಹಿರಿಯ ನಟ ರಣಧೀರ್ ಕಪೂರ್‌ ಅವರಿಗೆ ಕೋವಿಡ್‌–19 ದೃಢಪಟ್ಟಿದ್ದು, ಅವರನ್ನು ಇಲ್ಲಿನ ಕೋಕಿಲಾ ಬೆನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.‌

‘74 ವರ್ಷದ ರಣಧೀರ್‌ ಅವರನ್ನು ಬುಧವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ’ ಎಂದು ಕೋಕಿಲಾ ಬೆನ್‌ ಆಸ್ಪತ್ರೆಯ ವೈದ್ಯರಾದ ಡಾ. ಸಂತೋಷ್‌ ಶೆಟ್ಟಿ ತಿಳಿಸಿದ್ದಾರೆ.

ನಟ ರಾಜ್‌ ಕಪೂರ್‌ ಅವರ ಹಿರಿಯ ಪುತ್ರರಾದ ರಣಧೀರ್‌ ಅವರ ಸಹೋದರರಾದ ರಿಷಿ ಕಪೂರ್‌ ಮತ್ತು ರಾಜೀವ್‌ ಕಪೂರ್‌ ಅವರು ಒಂದು ವರ್ಷದ ಅವಧಿಯಲ್ಲಿ ನಿಧನರಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.