‘ಮೈಸಾ’ ಚಿತ್ರದ ಫಸ್ಟ್ ಲುಕ್ ರಿಲೀಸ್
(ಚಿತ್ರ ಕೃಪೆ– @iamRashmika)
ರಶ್ಮಿಕಾ ಮಂದಣ್ಣ ನಟನೆಯ ‘ಮೈಸಾ’ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಚಿತ್ರದಲ್ಲಿ ರಶ್ಮಿಕಾ ಅವರ ಗೆಟಪ್ ವಿಭಿನ್ನವಾಗಿದೆ.
ಚಿತ್ರದ ಪೋಸ್ಟರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ರಶ್ಮಿಕಾ, ' ನಾನು ಯಾವಾಗಲೂ ನಿಮಗೆ ಹೊಸದನ್ನು ನೀಡಲು ಪ್ರಯತ್ನಿಸುತ್ತೇನೆ... ವಿಭಿನ್ನವಾದದ್ದು... ರೋಮಾಂಚನಕಾರಿಯಾದದ್ದು.. ಅಂತಹದ್ದರಲ್ಲಿ ಇದು ಒಂದು.. ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
'ನಾನು ಇದುವರೆಗೆ ನಟಿಸದ ಪಾತ್ರ... ನಾನು ಎಂದಿಗೂ ಕಾಲಿಡದ ಜಗತ್ತು... ಇದು ಉಗ್ರವಾಗಿದೆ.. ಇದು ತೀವ್ರವಾಗಿದೆ ಮತ್ತು ಇದು ತುಂಬಾ ಹೊಸದಾಗಿದೆ.. ತುಂಬಾ ಉತ್ಸುಕಳಾಗಿದ್ದೇನೆ..ಇದು ಕೇವಲ ಆರಂಭ' ಎಂದು ಅವರು ಪೋಸ್ಟ್‌ನಲ್ಲಿ ಹೇಳಿದ್ದಾರೆ.
‘ಮೈಸಾ’ ಪ್ಯಾನ್ ಇಂಡಿಯಾ ಸಿನಿಮಾ. ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಮೂಡಿ ಬರುತ್ತಿದೆ. ಮಹಿಳಾ ಪ್ರಧಾನವಾಗಿರುವ ಈ ಚಿತ್ರವನ್ನು ರವೀಂದ್ರ ಪುಲ್ಲೇ ನಿರ್ದೇಶನ ಮಾಡುತ್ತಿದ್ದಾರೆ. ಅಜಯ್ ಹಾಗೂ ಅನಿಲ್ ಸಯ್ಯಾಪುರೆಡ್ಡಿ ಬಂಡವಾಳ ಹೂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.