
ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ
ಇನ್‌ಸ್ಟಾಗ್ರಾಂ ಚಿತ್ರ
ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈಗಾಗಲೇ ಈ ಜೋಡಿ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಈ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ಈ ತಾರಾ ಜೋಡಿಯ ವಯಸ್ಸಿನ ಚರ್ಚೆ ಜೋರಾಗಿದೆ.
ರಶ್ಮಿಕಾ, ವಿಜಯ್ ದೇವರಕೊಂಡ
ರಶ್ಮಿಕಾ, ವಿಜಯ್ ನಡುವಿನ ವಯಸ್ಸಿನ ಅಂತರ ಎಷ್ಟು?
ಅಂತರ್ಜಾಲದ ಮಾಹಿತಿ ಪ್ರಕಾರ, 1989ರ ಮೇ 9ರಂದು ವಿಜಯ್ ದೇವರಕೊಂಡ ಜನಿಸಿ, ಸದ್ಯ ಅವರಿಗೆ 36 ವರ್ಷ ವಯಸ್ಸು. ರಶ್ಮಿಕಾ ಮಂದಣ್ಣ 1996ರ ಏಪ್ರಿಲ್ 5ರಂದು ಜನಿಸಿದ್ದು, ಈಗ ಅವರಿಗೆ 29 ವರ್ಷ ವಯಸ್ಸು. ಈ ಇಬ್ಬರ ಮಧ್ಯೆ ಏಳು ವರ್ಷಗಳ ವಯಸ್ಸಿನ ಅಂತರ ಇದೆ.
ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ
‘ವಿರೋಶ್’ ಎಂದು ಹೆಸರಿಟ್ಟ ಅಭಿಮಾನಿಗಳು
ರಶ್ಮಿಕಾ ಮತ್ತು ವಿಜಯ್ ಅವರ ಅಭಿಮಾನಿಗಳು ಈ ಇಬ್ಬರ ಹೆಸರುಗಳನ್ನು ಒಟ್ಟುಗೂಡಿಸಿ ‘ವಿರೋಶ್’ ಎಂದು ಹೆಸರಿಟ್ಟಿದ್ದಾರೆ. ಈ ಇಬ್ಬರೂ ತಮ್ಮ ಮದುವೆಗೆ ‘ದಿ ವೆಡ್ಡಿಂಗ್ ಆಫ್ ವಿರೋಶ್’ ಎಂದು ಹೆಸರಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಅವರು ತಮ್ಮ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಜೊತೆಗೆ ‘ನೀವು ಪ್ರೀತಿಯಿಂದ ನಮಗೆ ‘ವಿರೋಶ್’ ಎಂದು ಹೆಸರಿಸಿದ್ದೀರಿ. ಆದ್ದರಿಂದ ನಾವು ನಮ್ಮ ಮದುವೆಗೆ ಅದೇ ಹೆಸರಿಡುತ್ತಿದ್ದೇವೆ. ನೀವು ಯಾವಾಗಲೂ ನಮ್ಮೊಂದಿಗೆ ಇರುತ್ತೀರಿ’ ಎಂದು ಬರೆದುಕೊಂಡಿದ್ದರು.
ಸಾಮಾಜಿ ಮಾಧ್ಯಮಗಳಲ್ಲಿ ಹರಿದಾಡಿದ ರಶ್ಮಿಕಾ –ವಿಜಯ್ ಮದುವೆ ಆಮಂತ್ರಣ ಪತ್ರಿಕೆ ಆಮಂತ್ರಣ ಪತ್ರಿಕೆ
ಮದುವೆ ಎಲ್ಲಿ? ಯಾರಿಗೆಲ್ಲಾ ಆಹ್ವಾನ?
ರಶ್ಮಿಕಾ ಹಾಗೂ ವಿಜಯ್ ಫೆಬ್ರುವರಿ 26ರಂದು ಉದಯಪುರದ ಐಟಿಸಿ ಮೆಮೆಂಟೋಸ್‌ನಲ್ಲಿ ಮದುವೆ ಆಗುತ್ತಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಈ ಮದುವೆಗೆ ಕೆಲ ಸೆಲೆಬ್ರಿಟಿಗಳು, ರಾಜಕೀಯ ನಾಯಕರು ಹಾಗೂ 100 ಅತಿಥಿಗಳನ್ನು ಆಹ್ವಾನಿಸಲಾಗಿದೆ. ಎರಡೂ ಕುಟುಂಬಗಳು ಮತ್ತು ಆಪ್ತ ಸ್ನೇಹಿತರು ಇದರಲ್ಲಿ ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.