ADVERTISEMENT

ಫೆಬ್ರುವರಿ 26ಕ್ಕೆ ರಶ್ಮಿಕಾ –ವಿಜಯ್ ಮದುವೆ? ಹರಿದಾಡಿದ ಆಮಂತ್ರಣ ಪತ್ರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಫೆಬ್ರುವರಿ 2026, 11:05 IST
Last Updated 16 ಫೆಬ್ರುವರಿ 2026, 11:05 IST
<div class="paragraphs"><p>ಸಾಮಾಜಿ ಮಾಧ್ಯಮಗಳಲ್ಲಿ ಹರಿದಾಡಿದ&nbsp;ರಶ್ಮಿಕಾ –ವಿಜಯ್ ಮದುವೆ ಆಮಂತ್ರಣ ಪತ್ರಿಕೆ ಆಮಂತ್ರಣ ಪತ್ರಿಕೆ</p></div>

ಸಾಮಾಜಿ ಮಾಧ್ಯಮಗಳಲ್ಲಿ ಹರಿದಾಡಿದ ರಶ್ಮಿಕಾ –ವಿಜಯ್ ಮದುವೆ ಆಮಂತ್ರಣ ಪತ್ರಿಕೆ ಆಮಂತ್ರಣ ಪತ್ರಿಕೆ

   

ಚಿತ್ರ: ಎಕ್ಸ್‌

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್‌ ದೇವರಕೊಂಡ ಡೇಟಿಂಗ್‌ನಲ್ಲಿದ್ದಾರೆ ಎನ್ನುವುದು ವರ್ಷಗಳಿಂದ ಸುದ್ದಿಯಾಗುತ್ತಲೇ ಇದೆ. ಅದರ ಬೆನ್ನಲ್ಲೇ ಇವರಿಬ್ಬರು ಮದುವೆಯಾಗುತ್ತಿದ್ದಾರೆ, ಫೆಬ್ರುವರಿಯಲ್ಲೇ ಹಸೆಮಣೆ ಏರುತ್ತಿದ್ದಾರೆ ಎನ್ನುವ ಗಾಳಿ ಸುದ್ದಿಗಳು ಕೇಳಿಬಂದಿದ್ದವು. ಇದರ ನಡುವೆಯೇ, ಈ ತಾರಾ ಜೋಡಿಯ ಮದುವೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ADVERTISEMENT

ರಶ್ಮಿಕಾ ಹಾಗೂ ವಿಜಯ್‌ ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಅವರನ್ನು ಖುದ್ದಾಗಿ ಭೇಟಿಯಾಗಿ ಆಮಂತ್ರಣ ಪತ್ರಿಕೆ ನೀಡಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ. ಈ ಮೂಲಕ ರಶ್ಮಿಕಾ ಹಾಗೂ ವಿಜಯ್‌ ಫೆಬ್ರುವರಿ ಕೊನೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವುದು ಪಕ್ಕಾ ಎನ್ನಲಾಗುತ್ತಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ, ‘ಕುಟುಂಬಸ್ಥರ ಆಶೀರ್ವಾದದೊಂದಿಗೆ ನಾನು ಮತ್ತು ರಶ್ಮಿಕಾ ಫೆಬ್ರುವರಿ 26ರಂದು ಸಾಂಪ್ರದಾಯಿಕವಾಗಿ, ಆಪ್ತರ ಸಮ್ಮುಖದಲ್ಲಿ ಮದುವೆಯಾಗುತ್ತಿದ್ದೇವೆ. ನಿಮ್ಮ ಉಪಸ್ಥಿತಿ ಮತ್ತು ಆಶೀರ್ವಾದ ಈ ಸಂದರ್ಭವನ್ನು ನಮಗೆ ಇನ್ನಷ್ಟು ವಿಶೇಷವಾಗಿಸುತ್ತದೆ. ನಮ್ಮೊಂದಿಗೆ ಸೇರಲು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇವೆ’ ಎಂದು ಬರೆದಿರುವುದಾಗಿ ವರದಿಯಾಗಿದೆ.

ರಶ್ಮಿಕಾ ಮತ್ತು ವಿಜಯ್‌ ರಾಜಸ್ಥಾನದ ಹೋಟೆಲ್‌ವೊಂದರಲ್ಲಿ ವಿವಾಹವಾಗಲಿದ್ದು, ಆಪ್ತರಿಗಷ್ಟೇ ಆಹ್ವಾನವಿದೆ. ಮಾರ್ಚ್‌ 4ರಂದು ಅದ್ಧೂರಿ ಆರತಕ್ಷತೆ ನಡೆಯಲಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.