ADVERTISEMENT

ದಳಪತಿ ವಿಜಯ್ ಹೆಸರಿನಲ್ಲಿ ರಾಜಕೀಯ ಪಕ್ಷ ನೋಂದಣಿ: ವಿಜಯ್ ತಂದೆ ಹೀಗಂದ್ರು...

ಪಿಟಿಐ
Published 7 ನವೆಂಬರ್ 2020, 6:38 IST
Last Updated 7 ನವೆಂಬರ್ 2020, 6:38 IST
ನಟ ವಿಜಯ್
ನಟ ವಿಜಯ್   

ಚೆನ್ನೈ: ತಮ್ಮ ಮಗ ಮತ್ತು ನಟ ವಿಜಯ್ ಅವರ ಹೆಸರಿನಲ್ಲಿ ರಾಜಕೀಯ ಪಕ್ಷವೊಂದರ ನೋಂದಣಿಯು ಆತನ ಅಭಿಮಾನಿಗಳನ್ನು ಪ್ರೋತ್ಸಾಹಿಸುವ ಒಂದು ಹೆಜ್ಜೆ ಮತ್ತು ಒಳ್ಳೆಯ ಉದ್ದೇಶದಿಂದ ಕೂಡಿದೆ ಎಂದು ತಮಿಳು ಚಲನಚಿತ್ರ ನಿರ್ದೇಶಕ ಮತ್ತು ಅವರ ತಂದೆ ಎಸ್.ಎ. ಚಂದ್ರಶೇಖರ್ ಶುಕ್ರವಾರ ಹೇಳಿದ್ದಾರೆ.

ತನ್ನ ಹೆಸರಿನಲ್ಲಿ ಪಕ್ಷದ ನೋಂದಣಿಯಾಗಿರುವುದನ್ನು ತಿಳಿದ ಬಳಿಕ ವಿಜಯ್ ಅವರು ತಂದೆಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದು ತಿಳಿದುಬಂದ ಒಂದು ದಿನದ ನಂತರ ವಿಜಯ್ ತಂದೆ ಸ್ಪಷ್ಟನೆ ನೀಡಲು ಪ್ರಯತ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಸಿಗರ್ ಮಂದ್ರಮ್' ಎಂಬ ಎಂಬ ಅಭಿಮಾನಿಗಳ ಸಂಘವನ್ನು 1993ರಲ್ಲಿ ವಿಜಯ್ ಹೆಸರಿನಲ್ಲಿ ಪ್ರಾರಂಭಿಸಲಾಯಿತು. ನಂತರ, ಇದು ಕಲ್ಯಾಣ ಘಟಕವಾಗಿ ವಿಕಸನಗೊಂಡಿತು ಮತ್ತು ತರುವಾಯ ಅದು 'ಜನರ ಚಳುವಳಿ' (ಮಕ್ಕಳ್ ಇಯಕ್ಕಂ) ಆಗಿ ಮಾರ್ಪಟ್ಟಿದೆ ಎಂದು ಹೇಳಿದರು.

ADVERTISEMENT

ಚಳವಳಿಯ ಅಭಿಮಾನಿಗಳು ಈಗಾಗಲೇ ಜನರ ಕಲ್ಯಾಣವನ್ನು ಗುರಿಯಾಗಿಟ್ಟುಕೊಂಡು ಹಲವಾರು ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. 'ಅವರನ್ನು ಮತ್ತಷ್ಟು ಪ್ರೋತ್ಸಾಹಿಸಲು ಮತ್ತು ಗುರುತಿಸಲು ಈಗ ನೋಂದಣಿ (ಚುನಾವಣಾ ಆಯೋಗದ ರಾಜಕೀಯ ಪಕ್ಷವಾಗಿ) ಮಾಡಲಾಗಿದೆ' ಎಂದು ತಿಳಿಸಿದ್ದಾರೆ.

'ಇಳಯ ದಳಪತಿ (ಯುವ ಕಮಾಂಡರ್) ವಿಜಯ್ ಮಕ್ಕಳ್ ಇಯಕ್ಕಂ' ಅನ್ನು ರಾಜಕೀಯ ಪಕ್ಷವನ್ನಾಗಿ ಪರಿವರ್ತಿಸುವ ಅಗತ್ಯವಿದೆ ಎಂದು ನನಗೆ ಅನ್ನಿಸಿತು ಮತ್ತು ನಾನು ಅದನ್ನು ಮಾಡುತ್ತಿದ್ದೇನೆ ಎಂದಿದ್ದಾರೆ.

ಇದೆಲ್ಲದಕ್ಕೂ ಪ್ರತಿಕ್ರಿಯೆ ನೀಡಿದ್ದ ವಿಜಯ್, 'ಪಕ್ಷದ ಜೊತೆಗೆ ನನಗೆ ಯಾವುದೇ ಸಂಬಂಧವಿಲ್ಲ. ಪಕ್ಷದೊಂದಿಗೆ ನನ್ನ ಹೆಸರು ಸೇರಿಸಿದರೆ, ಫೋಟೋ ಬಳಸಿಕೊಂಡರೆ ಕ್ರಮ ಕೈಗೊಳ್ಳಲಾಗುವುದು. ನನ್ನ ತಂದೆ ಪಕ್ಷವನ್ನು ನೋಂದಾಯಿಸಿದ್ದಾರೆ ಎಂದು ಅಭಿಮಾನಿಗಳು ಪಕ್ಷಕ್ಕೆ ಸೇರಬೇಡಿ. ಪಕ್ಷಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ' ಎಂದು ಹೇಳಿದ್ದಾರೆ.

ಪಕ್ಷದ ನೋಂದಣಿ ಕುರಿತು ವಿಜಯ್ ಅವರಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಚಂದ್ರಶೇಖರ್, ಅವನು ನನಗೆ (ವಿಜಯ್) ಗೊತ್ತಿಲ್ಲ ಎಂದು ಹೇಳುತ್ತಾನೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.