ಪಾರ್ಟಿ ಮಾಡುತ್ತಿದ್ದ ಆರೋಪದ ಮೇರೆಗೆ ಟಾಲಿವುಡ್ ಸ್ಟಾರ್ ನಟ ಚಿರಂಜೀವಿ ತಮ್ಮ ನಾಗ ಬಾಬು ಪುತ್ರಿ ಹಾಗೂ ನಟಿ ನಿಹಾರಿಕ ಕೊನಿಡೇಲಾರನ್ನು ಪೊಲೀಸರು ವಶಕ್ಕೆ ಪಡೆದ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿರುವ ಬೆನ್ನಲ್ಲೆತೆಲುಗು ನಟಿ ಹೇಮಾ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹೈದರಾಬಾದ್‌ನಲ್ಲಿ ನಿಗದಿತ ಸಮಯವನ್ನು ಮೀರಿ ಮಿಂಕ್ ಪಬ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ಆರೋಪದ ಮೇರೆಗೆ ನಿಹಾರಿಕಾ ಹಾಗೂ ಗಾಯಕ ರಾಹುಲ್ ಸಿಪ್ಲಿಗುಂಜ್ ಸೇರಿದಂತೆ 144 ಜನರನ್ನು ಪೊಲೀಸರು ಬಂಧಿಸಿದ್ದರು. ಇವರಲ್ಲಿ ನಟಿ ಹೇಮಾ ಕೂಡ ಇದ್ದರೂ ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಈ ಬಗ್ಗೆ ಇಲ್ಲಿನ ಸ್ಥಳೀಯ ಠಾಣೆಗೆ ಆಗಮಿಸಿದ್ದ ಹೇಮಾ ಸುದ್ದಿಗೋಷ್ಠಿ ಮಾಡಿ, ಆ ಪಬ್‌ನಲ್ಲಿ ನಾನು ಇರಲಿಲ್ಲ ಎಂದು ಹೇಳಿದ್ದಾರೆ. ಇದನ್ನು ಪೊಲೀಸರು ಕೂಡ ಖಚಿತಪಡಿಸಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.
ನಾನು ಪಾರ್ಟಿಯಲ್ಲಿ ಇಲ್ಲದಿದ್ದರೂ ಮಾಧ್ಯಮಗಳಲ್ಲಿ ನಾನು ಇದ್ದೇನೆ ಎಂಬ ವರದಿಗಳು ಪ್ರಸಾರವಾಗಿದ್ದವು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು,ಸುಳ್ಳು ಸುದ್ದಿಗಳನ್ನು ಯಾಕೆ ಪ್ರಸಾರ ಮಾಡುತ್ತೀರಾ? ನಿಮಗೆ ನೈತಿಕತೆ ಇಲ್ಲವೇ? ಎಂದು ಪ್ರಶ್ನೆ ಮಾಡಿ, ವರದಿಗಾರರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.
ನನಗೆ ಬೋರ್ ಹೊಡೆದಾಗಪಾರ್ಟಿಗೆ ಹೋಗುವುದು ನಿಜ, ಆದರೆ ನಾನು ಆ ದಿನ ಹೋಗಿರಲಿಲ್ಲ. ನನ್ನ ಪತಿಯ ಜೊತೆಬೇರೆ ಸ್ಥಳದಲ್ಲಿ ಇದ್ದೆ ಎಂದು ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿ ನಡೆದುಕೊಳ್ಳಬೇಡಿ ಎಂದು ಅವರು ಮಾಧ್ಯಮದವರಲ್ಲಿ ಮನವಿ ಮಾಡಿದ್ದಾರೆ.
ನಟಿ ನಿಹಾರಿಕ ಹಾಗೂ ಹೇಮಾ ಅವರ ವಿಚಾರದಲ್ಲಿ ಮಾಧ್ಯಮಗಳ ನಡೆಯ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.