ಚಿತ್ರ ಕೃಪೆ: @rihanna
ಭಾರತೀಯರಿಗೂ ಪರಿಚಿತರಾದ ಪಾಪ್ ತಾರೆ ಮತ್ತು ಫ್ಯಾಷನ್ ಮಾಡೆಲ್ ರಿಹಾನ ಅವರು ಸೆಪ್ಟೆಂಬರ್ 13 ರಂದು ತಮ್ಮ ಮೂರನೇ ಮಗುವಿಗೆ ಜನ್ಮ ನೀಡಿದ್ದು, ರಾಕಿ ಐರಿಶ್ ಮೇಯರ್ಸ್ ಎಂದು ಹೆಸರಿಟ್ಟಿದ್ದಾರೆ. ಗೆಳೆಯ ರಾಪರ್ ಎಎಸ್ಎಪಿ ರಾಕಿ ಅವರು ಮೂರನೇ ಮಗುವನ್ನು ಸ್ವಾಗತಿಸಿದ್ದಾರೆ.
ಈ ಬಗ್ಗೆ ಗಾಯಕಿ ರಿಹಾನ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಗಾಯಕ ರಾಪರ್ ರಾಕಿ ಅವರು ‘ಮೈ ಲಿಟಲ್ ಲೇಡೀಸ್' ಎಂದು ಪ್ರತಿಕ್ರಿಯಿಸಿದ್ದಾರೆ. ಇವರ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಶುಭಕೋರಿದ್ದಾರೆ.
ಕಳೆದ ವರ್ಷದ ನಡೆದ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹದ ಅದ್ಧೂರಿ ಕಾರ್ಯಕ್ರಮದಲ್ಲಿ ಗಾಯಕಿ ರಿಹಾನ ಹಾಡಿನ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಆ ಸಮಯದಲ್ಲಿ ಒಂದೆರಡು ದಿನಗಳ ಕಾಲ ಸಾಮಾಜಿಕ ಮಾಧ್ಯಮದಲ್ಲಿ ಇವರ ಹಾಡುಗಳು ಹರಿದಾಡುತ್ತಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.