ADVERTISEMENT

ಬಾಲಿವುಡ್ ನಟ ರಿಷಿ ಕಪೂರ್ ನಿಧನ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2020, 9:42 IST
Last Updated 30 ಏಪ್ರಿಲ್ 2020, 9:42 IST
ರಿಷಿ ಕಪೂರ್
ರಿಷಿ ಕಪೂರ್   

ಮುಂಬೈ: ಉಸಿರಾಟ ತೊಂದರೆಯಿಂದಬಳಲುತ್ತಿದ್ದ ಬಾಲಿವುಡ್‌ ಹಿರಿಯ ನಟ ರಿಷಿ ಕಪೂರ್ (67)‌ ಅವರು ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರನ್ನು ಇಲ್ಲಿನ ಸರ್ ಎಚ್‌.ಎನ್.‌ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಬುಧವಾರ ರಾತ್ರಿ ದಾಖಲಿಸಲಾಗಿತ್ತು.

2018ರಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಪೂರ್‌, ಅಮೆರಿಕದಲ್ಲಿ ಒಂದು ವರ್ಷಚಿಕಿತ್ಸೆ ಪಡೆದು 2019ರಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ವಾಪಸ್‌ ಆಗಿದ್ದರು.

ಕಳೆದ ಫೆಬ್ರವರಿಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾಗಿದ್ದರು.

ADVERTISEMENT

ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದ ರಿಷಿ ಕಪೂರ್‌ ಟ್ವಿಟರ್‌ ಖಾತೆಯಿಂದ ಏಪ್ರಿಲ್‌ 2ರ ನಂತರ ಯಾವುದೇ ಟ್ವೀಟ್‌ ಪ್ರಕಟವಾಗಿರಲಿಲ್ಲ.

ಕಪೂರ್‌ ಸಾವಿಗೆಬಾಲಿವುಡ್‌ ದಿಗ್ಗಜ ಅಮಿತಾಬ್‌ ಬಚನ್‌ ಟ್ವಿಟರ್‌ನಲ್ಲಿ ಕಂಬನಿ ಮಿಡಿದಿದ್ದಾರೆ. ‘ಅವರು ಹೊರಟರು. ನಾನು ಕಳೆದುಕೊಂಡೆ’ ಎಂದು ಭಾವುಕವಾಗಿ ಟ್ವೀಟ್ ಮಾಡಿದ್ದಾರೆ.

ಖ್ಯಾತ ನಟ ರಾಜ್‌ ಕಪೂರ್‌ ಹಾಗೂ ಕೃಷ್ಣ ರಾಜ್‌ ಕಪೂರ್ ಮಗನಾದ ರಿಷಿ ಕಪೂರ್‌, ‘ಮೇರಾ ನಾಮ್‌ ಜೋಕರ್‌’ ಮೂಲಕ 1970ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಈ ಸಿನಿಮಾದಲ್ಲಿ ಬಾಲನಟನಾಗಿ ನಟಿಸಿದ್ದ ಅವರಿಗೆ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು.

ಆದರೆ, ರಿಷಿ ಕಪೂರ್‌ ಅವರು ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ ಮೊದಲ ಸಿನಿಮಾ ಬಾಬಿ (1973). ಈ ಚಿತ್ರದಲ್ಲಿ ಡಿಂಪಲ್‌ ಕಪಾಡಿಯಾ ರಿಷಿಗೆ ನಾಯಕಿಯಾಗಿದ್ದರು. ಈ ಚಿತ್ರದಲ್ಲಿನ ನಟನೆಗಾಗಿ1974ರಲ್ಲಿ ಫಿಲ್ಮ್‌ ಫೇರ್‌ ಪ್ರಶಸ್ತಿ ಪಡೆದಿದ್ದರು. ಅದಾದ ಬಳಿಕ ರಿಷಿ ನಟಿಸಿದ್ದ ಹಲವು ಸಿನಿಮಾಗಳು ಅವರ ಖ್ಯಾತಿಯನ್ನು ಹೆಚ್ಚಿಸುವುವಂತೆಮಾಡಿದ್ದವು.

ಅವರು ನಟಿಸಿದ್ದ ‘ಹೀನಾ’ ಸಿನಿಮಾವನ್ನು ಸಹೋದರ ರಣ್‌ಧೀರ್‌ ಕಪೂರ್‌ ಮತ್ತು ತಂದೆ ರಾಜ್‌ ಕಪೂರ್‌ ನಿರ್ದೇಶಿಸಿದಿದ್ದರು. ಅಂತೆಯೇ, ‘ಪ್ರೇಮ್‌ ಗ್ರಂಥ್’‌ ಸಿನಿಮಾವನ್ನು ಮೂವರು ಸಹೋದರರೇ (ರಿಷಿ ಕಪೂರ್‌, ರಣ್‌ಬೀರ್‌ ಕಪೂರ್‌ ಮತ್ತು ರಾಜೀವ್‌ ಕಪೂರ್‌) ನಿರ್ಮಿಸಿದ್ದರು.

1980ರಲ್ಲಿ ಮೊದಲ ಸಾರಿಸಹೋದರ ರಣ್‌ಬೀರ್‌ ಕಪೂರ್‌ ಜೊತೆ ‘ಖಜಾನ’ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದರು.

2000ನಂತರದಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಕಪೂರ್‌, 2012ರಲ್ಲಿ ಹೃತಿಕ್‌ ರೋಷನ್‌ ನಟಸಿದ್ದ ‘ಅಗ್ನಿಪಥ್‌’ ಸಿನಿಮಾದಲ್ಲಿ ಖಳನಟನಾಗಿ ಮಿಂಚಿದ್ದರು. ಇದು ರಿಷಿ ಕಪೂರ್‌ ತಮ್ಮ ವೃತ್ತಿ ಬದುಕಿನಲ್ಲಿ ಖಳನಟನಾಗಿ ಕಾಣಿಸಿಕೊಂಡ ಮೊದಲ ಸಿನಿಮಾ ಆಗಿತ್ತು.

‘ಡೋಂಟ್‌ ಸ್ಟಾಪ್‌ ಡ್ರೀಮಿಂಗ್’, ‘ಸಂಬಾರ್‌ ಸಾಲ್ಸಾ’ನಂತಹ ಹಾಲಿವುಡ್ ಸಿನಿಮಾಗಳಲ್ಲಿಯೂ ಅವರು ನಟಿಸಿದ್ದರು.

ಪತ್ನಿ ನೀತು ಮತ್ತು ಪುತ್ರಿ ರಿದ್ಧಿಮಾ ಕಪೂರ್ ಸಾಹ್ನಿ, ಪುತ್ರರಣಬೀರ್ ಕಪೂರ್ ಅವರನ್ನು ರಿಷಿ ಕಪೂರ್‌ ಅಗಲಿದ್ದಾರೆ.

ರಿಷಿ ಕಪೂರ್‌ ನಟಿಸಿದ ಕೊನೆಯ ಸಿನಿಮಾ, ‘102 ನಾಟ್‌ಔಟ್‌’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.