‘ಮೇರಾ ನಾಮ್ ಜೋಕರ್’ ಚಿತ್ರದ ಮೂಲಕ ದುಃಖದಲ್ಲೂ ಹೇಗೆ ನಗಬೇಕು ಎಂದು ಹೇಳಿಕೊಟ್ಟ ರಿಷಿ ಕಪೂರ್, ಕ್ಯಾನ್ಸರ್ ಜೊತೆ ಸೆಣಸಾಡಿ, ಈಗ ಹೊಸ ಚಿತ್ರದ ಮೂಲಕ ಬಾಲಿವುಡ್ಗೆ ವಾಪಸ್ಸಾಗುತ್ತಿದ್ದಾರೆ. ಈ ಚಿತ್ರದ ನಾಯಕ ಅವರೇ.
ಶರ್ಮಾಜೀ ರೂಪದಲ್ಲಿ ಬೆಳ್ಳಿತೆರೆಗೆ ಎಂಟ್ರಿ ಕೊಡಲು ರಿಷಿ ಸಿದ್ಧತೆ ನಡೆಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಿಷಿಗೆ ಜೊತೆಯಾಗುತ್ತಿರುವವರು ನಟಿ ಜೂಹಿ ಚಾವ್ಲಾ.
‘ಇನಾ ಮೀನಾ ಡಿಕಾ’, ‘ಬೋಲ್ ರಾಧಾ ಬೋಲ್’ ಸಿನಿಮಾಗಳಲ್ಲಿ ಮಿಂಚಿದ್ದ ರಿಷಿ ಕಪೂರ್ ಮತ್ತು ಜೂಹಿ ಚಾವ್ಲಾ ಜೋಡಿ ಈಗ ‘ಶರ್ಮಾಜೀ ನಮ್ಕೀನ್’ ಚಿತ್ರದ ಮೂಲಕ ಮತ್ತೊಮ್ಮೆ ಮೋಡಿ ಮಾಡಲಿದೆ.
ಈ ಸಿನಿಮಾಕ್ಕೆ ರಿತೇಶ್ ಸಿದ್ವಾನಿ ಮಾಲೀಕತ್ವದಎಕ್ಸೆಲ್ ಎಂಟರ್ಟೇನ್ಮೆಂಟ್ ಬಂಡವಾಳ ಹೂಡಲಿದೆ. ಈ ಬಗ್ಗೆ ಸ್ವತಃ ರಿತೇಶ್ ಸಿದ್ವಾನಿ ಸ್ಪಷ್ಟಪಡಿಸಿದ್ದು, ಚಿತ್ರಕ್ಕೆ ಸಂಬಂಧಿಸಿದಂತೆ ಫೋಟೊವೊಂದನ್ನು ಟ್ವಿಟರ್ನಲ್ಲಿ ಪ್ರಕಟಿಸಿದ್ದಾರೆ.
‘ಶರ್ಮಾಜೀ ನಮ್ಕೀನ್’ ಚಿತ್ರ 2020ರಲ್ಲಿ ತೆರೆಮೇಲೆ ಬರಲಿದೆ. ಇದು ವಿಶ್ರಾಂತಿ ಬಳಿಕ ರಿಷಿ ಕಪೂರ್ ನಟನೆಯ ಮೊದಲ ಸಿನಿಮಾವಾಗಿದ್ದು, ಹಿತೇಶ್ ಬಾಟಿಯಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಸಿನಿಮಾ ಬಿಡುಗಡೆಗೂ ಮುನ್ನ ಇಮ್ರಾನ್ ಹಸ್ಮೀ ಅಭಿನಯದ‘ದಿ ಬಾಡಿ‘ ಚಿತ್ರದಲ್ಲೂ ರಿಷಿ ಕಪೂರ್ ಮುಖ್ಯ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.