ADVERTISEMENT

ಆರ್‌ಆರ್‌ಆರ್‌ ಸಿನಿಮಾದಲ್ಲಿ ಗುರುವಿನ ಪಾತ್ರದಲ್ಲಿ ಅಜಯ್‌

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 8:51 IST
Last Updated 26 ಜೂನ್ 2020, 8:51 IST
ಅಜಯ್‌ ದೇವಗನ್‌ ಹಾಗೂ ರಾಜಮೌಳಿ
ಅಜಯ್‌ ದೇವಗನ್‌ ಹಾಗೂ ರಾಜಮೌಳಿ   

ಬಾಹುಬಲಿ ಖ್ಯಾತಿಯ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಚಿತ್ರದಲ್ಲಿ ಬಾಲಿವುಡ್‌ ನಟ–ನಟಿಯರು ನಟಿಸುತ್ತಾರೆ ಎಂಬುದು ಹಳೆಯ ವಿಷಯ. ಬಾಲಿವುಡ್‌ ನಟ ಅಜಯ್‌ ದೇವಗನ್ ಈ ಸಿನಿಮಾದಲ್ಲಿ ಮುಖ್ಯ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಅಜಯ್‌ ದೇವಗನ್ ಪಾತ್ರದ ಕುರಿತು ಚಿತ್ರತಂಡ ಇಲ್ಲಿಯವರೆಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಆದರೆ ಅವರ ಪಾತ್ರದ ಬಗ್ಗೆ ಎಲ್ಲರಲ್ಲೂ ಕುತೂಹಲವಿತ್ತು. ಆ ಕುತೂಹಲಕ್ಕೆ ಈಗ ಬ್ರೇಕ್ ಬಿದಿದ್ದೆ.

ಆರ್‌ಆರ್‌ಆರ್‌ನಲ್ಲಿಅಲ್ಲುರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ ಅವರಿಗೆ ಗುರುವಿನ ಪಾತ್ರದಲ್ಲಿ ಅಜಯ್ ಕಾಣಿಸಿಕೊಳ್ಳಲಿದ್ದಾರೆ. ಈ ವಿಷಯವನ್ನು ಚಿತ್ರತಂಡ ಖಚಿತ‍ಪಡಿಸಿದೆ.

ಫ್ಲ್ಯಾಶ್‌ಬ್ಯಾಕ್‌ ಕತೆಯಲ್ಲಿ ಅಜಯ್ ಕಾಣಿಸಿಕೊಳ್ಳಲಿದ್ದು ಮೊದಲು ತಿಳಿಸಿದಂತೆ ಅತಿಥಿ ಪಾತ್ರಕ್ಕೆ ಅವರು ಸೀಮಿತವಾಗಿಲ್ಲ ಎನ್ನುತ್ತಿವೆ ಮೂಲಗಳು.

ADVERTISEMENT

ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ನಿರ್ಮಿಸಲಾದ ‘ದೆಹಲಿ ಇನ್ 1990’ ಸೆಟ್‌ನಲ್ಲಿ ಅಜಯ್ 10 ದಿನಗಳ ಕಾಲದ ಶೂಟಿಂಗ್ ಮುಗಿಸಿದ್ದಾರೆ. ಈ ಸನ್ನಿವೇಶದಲ್ಲಿಸೀತಾರಾಮ ರಾಜು ಹಾಗೂ ಕೋಮರಂ ಭೀಮ ಈ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಿಗೆ ಅರ್ಚರಿ ಹಾಗೂ ಗನ್‌ ಶೂಟಿಂಗ್ ತರಬೇತಿ ನೀಡುವ ಪಾತ್ರದಲ್ಲಿ ಅಜಯ್ ಕಾಣಿಸಿಕೊಳ್ಳಲಿದ್ದಾರೆ. ಆ ಪಾತ್ರಗಳಲ್ಲಿ ಜೂನಿಯರ್‌ ಎನ್‌ಟಿಆರ್‌ ಹಾಗೂ ರಾಮ್‌ ಚರಣ್ ಕಾಣಿಸಿಕೊಳ್ಳಲಿದ್ದಾರೆ.

ಅಜಯ್‌ ದೇವಗನ್‌ ನಟನೆಯ ಭಾಗದ ಶೂಟಿಂಗ್‌ ಅನ್ನು ಆದಷ್ಟು ಬೇಗ ಮುಗಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ ರಾಜಮೌಳಿ. ಅರ್ಧಕ್ಕೆ ನಿಂತ ಶೂಟಿಂಗ್ ಅನ್ನು ಸ್ಟುಡಿಯೊ ತೆರೆದ ಕೂಡಲೇ ಮಾಡಿ ಮುಗಿಸಲಿದ್ದಾರೆ.

ಕೋವಿಡ್ 19 ಕಾರಣದಿಂದ ಆರ್‌ಆರ್‌ಆರ್‌ ಶೂಟಿಂಗ್‌ಗೆ ಬ್ರೇಕ್ ಬಿದ್ದಿದ್ದು, ಸೆಟ್‌ನಲ್ಲಿ ಕೇವಲ ಶೇ 25ರಷ್ಟು ಭಾಗದ ಶೂಟಿಂಗ್‌ ಮಾತ್ರ ಬಾಕಿ ಉಳಿದಿದೆ.

ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಎಷ್ಟು ಸಮಯ ಹಿಡಿಯುತ್ತದೆ ಎಂಬುದರ ಆಧಾರ ಮೇಲೆ ಸಿನಿಮಾ ಬಿಡುಗಡೆಯ ದಿನಾಂಕ ನಿಂತಿದೆ. ಆದರೆ ಮೂಲಗಳ ಪ್ರಕಾರ 2021ರ ಬೇಸಿಗೆಯಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.