ADVERTISEMENT

ನಟ ರಕ್ಷಿತ್ ಶೆಟ್ಟಿಗೆ ಜೋಡಿಯಾದ ರುಕ್ಮಿಣಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 14:49 IST
Last Updated 3 ಫೆಬ್ರುವರಿ 2021, 14:49 IST
ರುಕ್ಮಿಣಿ ವಸಂತ್‌
ರುಕ್ಮಿಣಿ ವಸಂತ್‌   

ನಟ ರಕ್ಷಿತ್ ಶೆಟ್ಟಿ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಖ್ಯಾತಿಯ ಹೇಮಂತ್ ರಾವ್ ಜೊತೆ ಇನ್ನೊಂದು ಸಿನಿಮಾ ಮಾಡುತ್ತಿದ್ದಾರೆ. ಈ ಇಬ್ಬರ ಸಾರಥ್ಯದಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಬರುತ್ತಿದೆ. ಈ ಸಿನಿಮಾ ಸೆಟ್ಟೇರಲು ಸಿದ್ಧವಾಗಿದೆ. ಇದರಲ್ಲಿ ಬೀರ್‌ಬಲ್‌ ಸಿನಿಮಾ ಖ್ಯಾತಿಯ ರುಕ್ಮಿಣಿ ವಸಂತ್ ರಕ್ಷಿತ್‌ಗೆ ಜೋಡಿಯಾಗಲಿದ್ದಾರೆ.

ಚಿತ್ರದ ಭಾಗವಾಗುತ್ತಿರುವ ಸಂತಸದಲ್ಲಿ ಇನ್‌ಸ್ಟಾಗ್ರಾಂನಲ್ಲಿ ‘ಈ ಸಿನಿಮಾ ತಂಡಕ್ಕೆ ಕೃತಘ್ನಳಾಗಿದ್ದೇನೆ. ಲಾಕ್‌ಡೌನ್ ದಿನಗಳು ನನ್ನ ಪಾಲಿಗೆ ಕಠಿಣವಾಗಿತ್ತು. ನನ್ನ ಕೈಯಲ್ಲಿದ್ದ ಪ್ರಾಜೆಕ್ಟ್ ಸ್ಥಗಿತಗೊಂಡಿತ್ತು. ಆ ಸಮಯದಲ್ಲಿ ನಾನು ಹೇಮಂತ್ ಅವರಿಗೆ ಕಾಗದ ಬರೆದು ನನ್ನ ಬಗ್ಗೆ ಪರಿಚಯ ಹೇಳಿಕೊಂಡು, ನನ್ನ ಆಸಕ್ತಿಯ ಬಗ್ಗೆ ತಿಳಿಸಿದ್ದೆ. ಅವರಿಂದ ತಕ್ಷಣ ಉತ್ತರ ಬರಲಿಲ್ಲ. ಆಗ ನನಗೆ ಚಿಂತೆಯಾಗಿತ್ತು. ಈಗ ನಾನು ಚಿತ್ರತಂಡದ ಭಾಗವಾಗಿದ್ದೇನೆ. ಇದು ತುಂಬಾನೇ ಖುಷಿ ನೀಡಿದೆ’ ಎಂದು ಬರೆದುಕೊಂಡು ಸಂತಸ ಹಂಚಿಕೊಂಡಿದ್ದಾರೆ.

‘ಚಿತ್ರದಲ್ಲಿ ನಾನು ಪ್ರಿಯಾ ಎಂಬ ವಿದ್ಯಾರ್ಥಿನಿಯ ಎಂಬ ಪಾತ್ರ ನಿರ್ವಹಿಸುತ್ತಿದ್ದೇನೆ. ಅವಳಿಗೆ ಸಂಗೀತದ ಮೇಲೆ ಒಲವು. ಈ ಪಾತ್ರದ ಬಗ್ಗೆ ನಾನು ತುಂಬಾನೇ ಉತ್ಸುಕಳಾಗಿದ್ದೇನೆ’ ಎಂದಿದ್ದಾರೆ ರುಕ್ಮಿಣಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.