ADVERTISEMENT

ಕೋಟಿ ಕೈಬಿಟ್ಟ ನ್ಯಾಚುರಲ್‌ ಬ್ಯೂಟಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 19:30 IST
Last Updated 2 ಡಿಸೆಂಬರ್ 2019, 19:30 IST
ಸಾಯಿ ಪಲ್ಲವಿ 
ಸಾಯಿ ಪಲ್ಲವಿ    

ಈ ಹಿಂದೆ ಎರಡು ಕೋಟಿ ರೂಪಾಯಿ ಫೇರ್‌ನೆಸ್‌ ಕ್ರೀಮ್‌ ಜಾಹೀರಾತು ಆಫರ್‌ ನಿರಾಕರಿಸುವ ಮೂಲಕ ಸುದ್ದಿಯಾಗಿದ್ದ ನಟಿ ಸಾಯಿ ಪಲ್ಲವಿ ಈ ಬಾರಿ ಮತ್ತೆ ಅದೇ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ.

ಬಟ್ಟೆ ಶಾಪಿಂಗ್‌ ಮಾಲ್‌ ಬ್ರಾಂಡ್‌ ಅಂಬಾಸಿಡರ್‌ ಆಗಲು ಈ ಸಹಜ ಸುಂದರಿ ಮುಲಾಜಿಲ್ಲದೆ ನಿರಾಕರಿಸಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದಕ್ಕಾಗಿಶಾಪಿಂಗ್ ಮಾಲ್‌ ಒಂದು ಕೋಟಿ ರೂಪಾಯಿ ಆಫರ್ ನೀಡಿತ್ತು. ಫೇರ್‌ನೆಸ್‌ ಕ್ರೀಮ್‌ನಿಂದ ಅಂದ ಹೆಚ್ಚುತ್ತಿದೆ ಎಂಬ ವಿಷಯದಲ್ಲಿ ವೈಯಕ್ತಿಕವಾಗಿ ನಂಬುಗೆ ಇಲ್ಲ. ಜಾಹೀರಾತಿನಲ್ಲಿ ನಟಿಸುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವ ಮನಸ್ಸಿಲ್ಲ ಎಂದು ಸಾಯಿ ಪಲ್ಲವಿ ಅಭಿಮಾನಿಗಳ ಹೃದಯ ಗೆದ್ದಿದ್ದರು. ಈಗ ಮತ್ತೊಂದು ಅದೇ ರೀತಿಯ ಗಟ್ಟಿ ನಿರ್ಧಾರ ತೆಳೆಯುವ ಮೂಲಕ ಜೀವನಕ್ಕೆ ದುಡ್ಡು ಮುಖ್ಯವಲ್ಲ, ತತ್ವ, ಸಿದ್ಧಾಂತಗಳು ಎಂಬ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ:ಸಾಯಿ ಪಲ್ಲವಿ ಹವಾ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.