
ಎಸ್.ಮಹೇಂದರ್, ಹಂಸಲೇಖ ಒಟ್ಟಾಗಿ ಚಿತ್ರ ಮಾಡುತ್ತಿರುವ ಸುದ್ದಿ ಇತ್ತೀಚೆಗಷ್ಟೇ ಹೊರಬಿದ್ದಿತ್ತು. ಇದೀಗ ಚಿತ್ರದ ಶೀರ್ಷಿಕೆ ಘೋಷಣೆಯಾಗಿದ್ದು ‘ಕೆಂಬರಗ’ ಎಂದು ಹೆಸರಿಡಲಾಗಿದೆ.
‘ಶೀರ್ಷಿಕೆ ಹೊಸತಾಗಿದೆ. ಆದರೆ ಆ ಪದಕ್ಕೆ ಒಂದು ಅರ್ಥವಿದೆ. ಅದು ಏನೆಂದು ತಿಳಿಯಲು ಸಿನಿಮಾ ಹೊರಬರುವವರೆಗೆ ಕಾಯಲೇಬೇಕು. ಕನ್ನಡ ಚಿತ್ರರಂಗವನ್ನು ಆಳಿದವರು, ಆಳುತ್ತಿರುವವರ ಜತೆಗೆ ಸಿನಿಮಾ ತತ್ವ, ಸಿದ್ಧಾಂತ, ಮಾದರಿ ಇತರೆ ವಿಷಯಗಳನ್ನು ಚಿತ್ರ ಒಳಗೊಂಡಿರಲಿದೆ. ಮೂಲ ಸಿನಿಮಾ ಸಿದ್ಧಾಂತದ ಜೊತೆಗೆ, ಆಧುನಿಕ ಸಿನಿಮಾ ನಿರ್ಮಾಣ ಶೈಲಿಯಲ್ಲಿ ಮೂರು ತಲೆಮಾರಿಗೂ ನಾಟುವ, ರುಚಿಸುವ, ಅಪ್ಪಟ ನೆಲದಕಥೆಯೊಂದನ್ನ ಹೇಳಲು ಹೊರಟಿದ್ದೇವೆ’ ಎಂದಿದೆ ಚಿತ್ರತಂಡ.
ಈ ಜೋಡಿ 20 ಸಿನಿಮಾಗಳಿಗೆ ಜೊತೆಯಾಗಿ ಕೆಲಸ ಮಾಡಿತ್ತು. ಶ್ರೀಗುರುರಾಯರು ಸಿನಿಮಾ ಬ್ಯಾನರ್‌ನಡಿಯಲ್ಲಿ ಕೆ.ಸಿ ವಿಜಯಕುಮಾರ್ ಬಂಡವಾಳ ಹೂಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.