ಸುಜಿತ್ ರೆಡ್ಡಿ ಅವರ ಸ್ಟೈಲಿಷ್, ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ‘ಸಾಹೊ’ದ ಟ್ರೇಲರ್ ನಾಳೆ ಬಿಡುಗಡೆಯಾಗಲಿದೆ. ಮೂರು ವರ್ಷಗಳಿಂದಲೂ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿರುವ ‘ಸಾಹೊ’ದಲ್ಲಿ ಪ್ರಭಾಸ್ ನಾಯಕನಾಗಿದ್ದು, ಶ್ರದ್ಧಾ ಕಪೂರ್ ನಾಯಕಿಯಾಗಿದ್ದಾರೆ.
ಸಿನಿಮಾದ ಪೋಸ್ಟರ್‌ಗಳು ಈಗಾಗಲೇ ಬಿಡುಗಡೆಯಾಗಿದ್ದು, ಪ್ರಭಾಸ್ ಮತ್ತು ಶ್ರದ್ಧಾ ಪಾತ್ರಗಳ ಬಗ್ಗೆ ಕುತೂಹಲ ಗರಿಗೆದರಿದೆ. ಯುವಿ ಕ್ರಿಯೇಷನ್ಸ್ ನಿರ್ಮಿಸಿರುವ ಈ ಚಿತ್ರದ ಹೊಸ ಪೋಸ್ಟರ್ ಈಚೆಗಷ್ಟೇ ಟ್ವಿಟರ್‌ನಲ್ಲಿ ಬಿಡುಗಡೆಯಾಗಿದೆ. ಈ ಪೋಸ್ಟರ್‌ನಲ್ಲಿ ಕೆಂಪು ಉಡುಗೆ ತೊಟ್ಟ ಶ್ರದ್ಧಾ ಪಿಸ್ತೂಲನ್ನು ಗುರಿಯಾಗಿಟ್ಟುಕೊಂಡ ನಿಂತ ಭಂಗಿ ಇದೆ.
‘ಸಾಹೊ’ಕ್ಕೆ ಈ ಹಿಂದೆ ಶಂಕರ್, ಎಹಸಾನ್, ಲಾಯ್ ಸಂಗೀತ ನಿರ್ದೇಶಕರಾಗಿದ್ದರು. ಆದರೆ, ನಿರ್ದೇಶಕರು ಮತ್ತೊಬ್ಬ ಸಂಗೀತ ನಿರ್ದೇಶಕರನ್ನು ತಂಡಕ್ಕೆ ಸೇರಿಸಿಕೊಂಡ ಕಾರಣ ಶಂಕರ್, ಎಹಸಾನ್–ಲಾಯ್ ಸಿನಿಮಾದಿಂದ ಹೊರಬಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.