ಈ ಹಿಂದೆ ‘ಆರ’ ಎಂಬ ಸಿನಿಮಾ ಮಾಡಿದ್ದ ರೋಹಿತ್ ಈಗ ‘ಸಹ್ಯಾದ್ರಿ’ ತಪ್ಪಲಿನತ್ತ ಹೊರಟಿದ್ದಾರೆ. ಮಲೆನಾಡು ಭಾಗದ ಹೋರಾಟಗಾರನ ಕಥೆಯನ್ನು ಹೊಂದಿರುವ ಈ ಚಿತ್ರವನ್ನು ಅವರೇ ನಿರ್ದೇಶಿಸುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.
‘ಹದಿಮೂರು ಭಾಷೆಗಳಲ್ಲಿ ಈ ಸಿನಿಮಾ ಸಿದ್ಧಗೊಳ್ಳುತ್ತಿದೆ. ಕನ್ನಡದಲ್ಲಿ ಚಿತ್ರೀಕರಣಗೊಂಡು ಉಳಿದ ಭಾಷೆಗಳಿಗೆ ಡಬ್ ಆಗಲಿದೆ. ಚೆನ್ನೈನಿಂದ ನಾಯಕಿ ಬರುತ್ತಾರೆ. ಸಹ್ಯಾದ್ರಿ ತಪ್ಪಲಿನ ಹೋರಾಟಗಾರನೊಬ್ಬನ ಕಥೆ. ಆತನನ್ನು ಹೊಡೆಯಲು ಯಾರಿದಂಲೂ ಸಾಧ್ಯವಾಗುತ್ತಿರುವುದಿಲ್ಲ. ಅವನು ಸಮಾಜಕ್ಕೆ ಏನು ಮಾಡುತ್ತಾನೆ ಎಂಬುದೇ ಕಥೆ’ ಎಂದರು ರೋಹಿತ್.
‘ಒಂದು ಹಂತದ ಚಿತ್ರೀಕರಣ ಮುಗಿದಿದೆ. ಇನ್ನೊಂದೆರಡು ತಿಂಗಳಲ್ಲಿ ಮುಂದಿನ ಭಾಗದ ಚಿತ್ರೀಕರಣ ಪ್ರಾರಂಭವಾಗಲಿದೆ. ಮುಂದಿನ ವರ್ಷ ಬಿಡುಗಡೆ ಆಲೋಚನೆಯಿದೆ. ಬೈಂದೂರು, ಶಿವಮೊಗ್ಗ, ಮೂಡಿಗೆರೆ, ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸುವ ಯೋಜನೆಯಿದೆ’ ಎಂದರು ಅವರು.
ಗ್ಯಾಂಗ್‌ಸ್ಟರ್ ಕಥೆ ಹೊಂದಿರುವ ಚಿತ್ರಕ್ಕೆ ನವರತ್ ವಾಸುದೇವ ಸಂಗೀತ, ವಿನೋದ್ ಲೋಕಣ್ಣನವರ್ ಛಾಯಾಚಿತ್ರಗ್ರಹಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.