ADVERTISEMENT

ನ.15ಕ್ಕೆ ಸಾಯಿ ಪಲ್ಲವಿ ಅಭಿನಯದ ‘ಅನುಕೋನಿ ಅತಿಥಿ’ ತೆರೆಗೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 9:36 IST
Last Updated 5 ನವೆಂಬರ್ 2019, 9:36 IST
ಸಾಯಿ ಪಲ್ಲವಿ
ಸಾಯಿ ಪಲ್ಲವಿ   

ಸಾಯಿ ಪಲ್ಲವಿ ನಟಿಸಿರುವ ‘ಅನುಕೋನಿ ಅತಿಥಿ’ ಚಿತ್ರವು ನವೆಂಬರ್‌ 15ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಫಹಾದ್‌ ಫಸಿಲ್‌, ಪ್ರಕಾಶ್‌ ರಾಜ್‌ ಹಾಗೂ ಅತುಲ್‌ ಕುಲಕರ್ಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಈ ಚಿತ್ರವು ಮಲಯಾಳಂನಲ್ಲಿ ‘ಅಥಿರನ್‌’ ಎಂದು ಬಿಡುಗಡೆಯಾಗಿತ್ತು. ಈಗ ಈ ಚಿತ್ರ ತೆಲುಗಿಗೆ ಡಬ್‌ ಆಗಿ ‘ಅನುಕೋನಿ ಅತಿಥಿ’ ಎಂದು ಬಿಡುಗಡೆಯಾಗುತ್ತಿದೆ.

ಈ ಚಿತ್ರವನ್ನು ಅಣ್ಣಾಂರೆಡ್ಡಿ ಕೃಷ್ಣಕುಮಾರ್‌ ಹಾಗೂ ಗೋವಿಂದ ರವಿ ಕುಮಾರ್‌ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು.

ಈ ಚಿತ್ರವನ್ನು ತೆಲುಗಿನಲ್ಲಿ ಬಿಡುಗಡೆ ಮಾಡಲು ಸೆನ್ಸರ್‌ ಬೋರ್ಡ್‌ ಪ್ರಮಾಣ ಪತ್ರ ಲಭಿಸಿದೆ. ನವೆಂಬರ್‌ 15ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. 1970ರಲ್ಲಿ ಕೇರಳದಲ್ಲಿ ನಡೆದ ಘಟನೆಗಳನ್ನು ಈ ಚಿತ್ರ ಒಳಗೊಂಡಿದೆ. ಸಾಯಿ ಪಲ್ಲವಿ ತೆಲುಗಿನ ಸಿನಿಪ್ರಿಯರಿಗೆ ಚಿರಪರಿಚಿತ ಮುಖ. ಹಾಗೇ ಪ್ರಕಾಶ್‌ರಾಜ್‌ ಹಾಗೂ ಅತುಲ್‌ ಕುಲಕರ್ಣಿ ಅವರೂ ಸಹ ಟಾಲಿವುಡ್‌ನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗಾಗಿ ಮಲಯಾಳದಲ್ಲಿ ಬಿಡುಗಡೆಗೊಂಡ ಈ ಚಿತ್ರವನ್ನು ಟಾಲಿವುಡ್‌ನಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ.

ADVERTISEMENT

ಸಾಯಿಪಲ್ಲವಿ, ರಾನಾ ದಗ್ಗುಬಾಟಿ ಜೊತೆ ‘ವಿರಾಟಪರ್ವ’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಶೇಖರ್‌ ಕಮ್ಮುಲ ಅವರ ಹೊಸ ಚಿತ್ರದಲ್ಲೂ ಸಾಯಿಪಲ್ಲವಿ ನಟಿಸುತ್ತಿದ್ದು, ಇದರಲ್ಲಿ ನಾಗಚೈತನ್ಯ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.