
ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಅವರು ಬಾಲ್ಯದ ದಿನಗಳಲ್ಲಿ ಕ್ಲಿಕ್ಕಿಸಿಕೊಂಡ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದರಲ್ಲಿನ ಒಂದು ಫೋಟೊ ಎಲ್ಲರ ಗಮನ ಸೆಳೆದಿದೆ.
ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊಗಳನ್ನು ಹಂಚಿಕೊಂಡಿರುವ ಅವರು, ‘2000 ರಿಂದ 2006ರ ನೆನಪುಗಳು’ ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
ಅದರಲ್ಲಿನ ಒಂದು ಫೋಟೊದಲ್ಲಿ ಬಾಲಿವುಡ್ ನಟ ಹೃತಿಕ್ ರೋಷನ್ ಜೊತೆ ಸಾಕ್ಷಿ ಪೋಸ್ ಕೊಟ್ಟಿದ್ದಾರೆ. ಇದು 2006ರ ‘ಕ್ರಿಶ್‘ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ತೆಗೆದಿರುವಂತೆ ಕಾಣುತ್ತದೆ.
ಏನತ್ಮಧ್ಯೆ, ಸಾಕ್ಷಿ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಸಾಕ್ಷಿ ಅವರ ಸೌಂದರ್ಯವನ್ನು ಹೊಗಳಿದ್ದಾರೆ. ‘ಏನೂ ಬದಲಾಗಿಲ್ಲ. ಅವರ(ಸಾಕ್ಷಿ) ನಗು ಇನ್ನೂ ಹಾಗೆಯೇ ಉಳಿದಿದೆ’ ಎಂದು ಹೇಳಿದ್ದಾರೆ.
ಸಾಕ್ಷಿ ಅವರ ಈ ಪೋಸ್ಟ್‌ಗೆ ಸುಮಾರು 3 ಲಕ್ಷ ಜನರು ಲೈಕ್ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.