ADVERTISEMENT

ಸಲ್ಮಾನ್ ಖಾನ್ ನಟನೆಯ 'ಬ್ಯಾಟಲ್ ಆಫ್ ಗಾಲ್ವಾನ್​' ಚಿತ್ರೀಕರಣ ಪೂರ್ಣ

ಪಿಟಿಐ
Published 19 ಸೆಪ್ಟೆಂಬರ್ 2025, 9:49 IST
Last Updated 19 ಸೆಪ್ಟೆಂಬರ್ 2025, 9:49 IST

ಚಿತ್ರ: ಇನ್‌ಸ್ಟಾಗ್ರಾಮ್‌–beingsalmankhan

ಚಿತ್ರ: ಇನ್‌ಸ್ಟಾಗ್ರಾಮ್‌–beingsalmankhan

ಬಾಲಿವುಡ್‌ ನಟ ಸಲ್ಮಾನ್ ಖಾನ್ ಅಭಿನಯದ ‘ಬ್ಯಾಟಲ್ ಆಫ್ ಗಾಲ್ವಾನ್‌’ ಚಿತ್ರೀಕರಣ ಮುಕ್ತಾಯಗೊಂಡಿದೆ. ಬಹು ಮುಖ್ಯವಾದ 45 ದಿನಗಳ ಚಿತ್ರೀಕರಣ ಮುಗಿದಿದೆ. ನೈಜ ಘಟನೆ ಆಧಾರಿತ ಬ್ಯಾಟಲ್ ಆಫ್ ಗಾಲ್ವಾನ್ ಸಿನಿಮಾವು 2026ರ ಜನವರಿಯಲ್ಲಿ ತೆರೆ ಕಾಣಲಿದೆ.

ADVERTISEMENT

ಈ ಚಿತ್ರದಲ್ಲಿ 59 ವರ್ಷದ ಸಲ್ಮಾನ್ ಖಾನ್ ಕರ್ನಲ್ ಬಿಕ್ಕುಮಲ್ಲ ಸಂತೋಷ್ ಬಾಬು ಪಾತ್ರದಲ್ಲಿ ನಟಿಸಿದ್ದಾರೆ. ವಿಶೇಷ ಏನೆಂದರೆ ನಟ ಸಲ್ಮಾನ್ ಖಾನ್ ಅವರನ್ನು ಹಿಂದೆಂದೂ ಕಾಣಿಸಿಕೊಳ್ಳದ ಅವತಾರದಲ್ಲಿ ತೋರಿಸಲಾಗಿದೆ. ಈ ಸಿನಿಮಾದಲ್ಲಿ ಸಲ್ಮಾನ್‌ ಖಾನ್‌ಗೆ ನಾಯಕಿಯಾಗಿ ನಟಿ ಚಿತ್ರಾಂಗದಾ ಸಿಂಗ್ ಅವರು ಕಾಣಿಸಿಕೊಳ್ಳಲಿದ್ದಾರೆ.

ಈ ಸಿನಿಮಾವು 2020ರಲ್ಲಿ ಭಾರತ ಮತ್ತು ಚೀನಾದ ಗಡಿಯ ಗಾಲ್ವಾನ್​ ಕಣಿವೆಯಲ್ಲಿ ನಡೆದ ಘರ್ಷಣೆಯನ್ನು ಆಧರಿಸಿದೆ. ಬ್ಯಾಟಲ್ ಆಫ್ ಗಾಲ್ವಾನ್ ಚಿತ್ರವನ್ನು ಶೂಟೌಟ್ ಅಟ್ ಲೋಖಂಡ್‌ವಾಲಾ ಖ್ಯಾತಿಯ ಅಪೂರ್ವ ಲಖಿಯಾ ನಿರ್ದೇಶಿಸಿದ್ದಾರೆ. ಚಿತ್ರೀಕರಣ ಮುಕ್ತಾಯದ ಬಗ್ಗೆ ನಿರ್ಮಾಪಕರು ಗುರುವಾರ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಲಖಿಯಾ ಸಲ್ಮಾನ್ ಜೊತೆಗಿನ ಫೋಟೊವನ್ನು ಪೋಸ್ಟ್ ಮಾಡಿ, ಇದು 45 ದಿನಗಳು ಮುಗಿದಿವೆ ಎಂದು ಶೀರ್ಷಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.