
ಸಲ್ಮಾನ್ ಖಾನ್:
ಚಿತ್ರ: ಇನ್‌ಸ್ಟಾಗ್ರಾಂ
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಿನಿಮಾದ ಜೊತೆಗೆ ಅವರು ತಮ್ಮ ಫಿಟ್‌ನೆಸ್‌ನಿಂದಲೂ ಗಮನಸೆಳೆದಿದ್ದಾರೆ. ಅನೇಕ ವರ್ಷಗಳಿಂದ ಫಿಟ್‌ನೆಸ್ ಮೇಲೆ ಗಮನಹರಿಸುತ್ತಿರುವ ಅವರು, ತಮ್ಮ 60ನೇ ವರ್ಷದಲ್ಲೂ ಸಿಕ್ಕಾಪಟ್ಟೆ ಫಿಟ್ ಆಗಿದ್ದಾರೆ.
ಸಲ್ಮಾನ್ ಖಾನ್ ಅವರ 60ನೇ ವರ್ಷದ ಜನ್ಮದಿನಾಚರಣೆಗೆ ಇನ್ನು 5 ದಿನಗಳು ಮಾತ್ರ ಬಾಕಿ ಉಳಿದಿವೆ. ಆದರೆ, ಅವರು ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಹಂಚಿಕೊಂಡಿರುವ ಚಿತ್ರಗಳು ಅವರಿಗೆ ನಿಜಕ್ಕೂ 60 ವರ್ಷ ವಯಸ್ಸಾಗಿದೆಯಾ? ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.
ಫಿಟ್‌ನೆಸ್ ಕೇವಲ ಒಂದು ಪ್ರವೃತ್ತಿಯಲ್ಲ, ಅದು ಜೀವನದ ಒಂದು ಭಾಗ, ಸದೃಡ ಆರೋಗ್ಯ ಪಡೆಯಲು ತಾತ್ಕಾಲಿಕ ಪ್ರಯತ್ನಕ್ಕಿಂತ ದೀರ್ಘಾವಧಿಯ ಮನಸ್ಥಿತಿ ಅಗತ್ಯವಿದೆ ಎಂಬ ನಿಯಮವನ್ನು ನಟ ಸಲ್ಮಾನ್ ಖಾನ್ ಅವರು ಪ್ರತಿಪಾದಿಸುತ್ತಾರೆ. ಅವರು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಚಿತ್ರಗಳ ಜೊತೆಗೆ ‘ನನಗೆ 60 ವರ್ಷಗಳಾದಾಗ ನಾನು ಹೀಗೆ ಕಾಣಿಸುತ್ತಿದ್ದರೆ ಎಷ್ಟು ಚೆನ್ನಾಗಿರುತ್ತದೆ, 60 ವರ್ಷಕ್ಕೆ ಇನ್ನು 6 ದಿನಗಳು ಬಾಕಿ ಉಳಿದಿದೆ’ ಎಂದು ಬರೆದುಕೊಂಡಿದ್ದಾರೆ.
ಸದ್ಯ, ಸಲ್ಮಾನ್ ಖಾನ್ ಅವರು ಹಂಚಿಕೊಂಡಿರುವ ಚಿತ್ರಗಳು ವ್ಯಾಪಕ ಮೆಚ್ಚುಗೆ ಪಡೆದುಕೊಳ್ಳುತ್ತಿವೆ. ಅನೇಕರು 60 ವರ್ಷ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ನೀವು ನಮ್ಮ ಪೀಳಿಗೆಯ ಅತ್ಯುತ್ತಮ ಫಿಟ್ ನಟ ಎಂದು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.