ADVERTISEMENT

Bollywood: ರಾಜ್ ಆ್ಯಂಡ್‌ ಡಿಕೆ ಜತೆ ಸಲ್ಮಾನ್‌ ಸಿನಿಮಾ?

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 23:30 IST
Last Updated 7 ಜನವರಿ 2026, 23:30 IST
ಸಲ್ಮಾನ್‌ ಖಾನ್‌
ಸಲ್ಮಾನ್‌ ಖಾನ್‌   

ನಟ ಸಲ್ಮಾನ್ ಖಾನ್‌ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಅವರ ಹಿಂದಿನ ಸಿನಿಮಾಗಳು ಒಂದರ ಹಿಂದೊಂದರಂತೆ ಸೋಲು ಕಂಡಿದ್ದವು. ಹೀಗಾಗಿ ಈ ಸಲ ಸಲ್ಮಾನ್‌ ಗಟ್ಟಿಯಾದ ಕಥಾವಸ್ತುವಿನ ಚಿತ್ರಕ್ಕೆ ಕೈಹಾಕಲು ಸಿದ್ಧರಾಗಿದ್ದು, ರಾಜ್ ಆ್ಯಂಡ್‌ ಡಿಕೆ ಜತೆ ತಮ್ಮ ಮುಂದಿನ ಸಿನಿಮಾದ ಮಾತುಕತೆ ನಡೆಸಿದ್ದಾರೆ ಎಂದು ಹಿಂದಿ ಮಾಧ್ಯಮಗಳು ವರದಿ ಮಾಡಿವೆ.

‘ದಿ ಫ್ಯಾಮಿಲಿ ಮ್ಯಾನ್’ ವೆಬ್‌ ಸಿರೀಸ್‌ನಿಂದ ಜನಪ್ರಿಯರಾದ ರಾಜ್ ಮತ್ತು ಡಿಕೆ, ವಿಭಿನ್ನ ಕಥಾವಸ್ತುವಿನ ಸರಣಿಯಿಂದಲೇ ಗಮನ ಸೆಳೆದವರು. ಸಲ್ಮಾನ್ ಖಾನ್ ಈ ಜೋಡಿಯ ಜತೆ ಆ್ಯಕ್ಷನ್-ಕಾಮಿಡಿ ಶೈಲಿಯ ಸಿನಿಮಾ ಮಾಡಲು ಸಿದ್ಧತೆ ನಡೆಸಿದ್ದಾರೆ. ಸ್ಕ್ರಿಪ್ಟ್‌ ಕೆಲಸಗಳು ನಡೆಯುತ್ತಿದ್ದು, ಶೀಘ್ರದಲ್ಲಿಯೇ ಚಿತ್ರ ಸೆಟ್ಟೇರಲಿದೆ ಎನ್ನಲಾಗಿದೆ.

ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಸಿನಿಮಾ 2025ರಲ್ಲಿ ತೆರೆ ಕಂಡಿತ್ತು. ಎ.ಆರ್. ಮುರುಗದಾಸ್ ನಿರ್ದೇಶನ ಮಾಡಿದ್ದ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಯಶಸ್ಸು ಕಾಣಲಿಲ್ಲ. ಸದ್ಯ ಸಲ್ಮಾನ್‌ ಅವರ ‘ಬ್ಯಾಟಲ್ ಆಫ್ ಗಲ್ಮಾನ್’ ಚಿತ್ರ ಬಿಡುಗಡೆಗಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.