ADVERTISEMENT

ಹೆಲ್ತ್‌ ಪಾಡ್‌ಕಾಸ್ಟ್‌ ಮೂಲಕ ಕೆಲಸಕ್ಕೆ ವಾಪಸ್ಸಾಗುತ್ತಿದ್ದೇನೆ: ನಟಿ ಸಮಂತಾ

ಪಿಟಿಐ
Published 11 ಫೆಬ್ರುವರಿ 2024, 10:00 IST
Last Updated 11 ಫೆಬ್ರುವರಿ 2024, 10:00 IST
<div class="paragraphs"><p>ಬಹುಭಾಷಾ ನಟಿ ಸಮಂತಾ ರುತ್ ಪ್ರಭು  </p></div>

ಬಹುಭಾಷಾ ನಟಿ ಸಮಂತಾ ರುತ್ ಪ್ರಭು

   

-ಚಿತ್ರಕೃಪೆ: ಇನ್‌ಸ್ಟಾಗ್ರಾಮ್

ನವದೆಹಲಿ: ಆರೋಗ್ಯಕ್ಕೆ ಸಂಬಂಧಿಸಿದ ಪಾಡ್‌ಕಾಸ್ಟ್‌ ಮೂಲಕ ಮತ್ತೆ ಕೆಲಸಕ್ಕೆ ಮರಳುವುದಾಗಿ ನಟಿ ಸಮಂತಾ ರುತ್ ಪ್ರಭು ಹೇಳಿದ್ದಾರೆ.

ADVERTISEMENT

‘ಕೆತಡಲ್‌’ ಸಿರೀಸ್‌ ಚಿತ್ರೀಕರಣ ಮುಕ್ತಾಯಗೊಳಿಸಿ ಕಳೆದ ಜುಲೈನಲ್ಲಿ ಆರೋಗ್ಯದಡೆಗೆ ಗಮನಹರಿಸಬೇಕೆಂದು ವಿರಾಮ ತೆಗೆದುಕೊಳ್ಳುತ್ತಿದ್ದೇನೆ ಎಂದಿದ್ದರು. ಇದೀಗ ಏಳು ತಿಂಗಳ ಬಳಿಕ ಮತ್ತೆ ಹೊಸತನದೊಂದಿಗೆ ವಾಪಸ್ಸಾಗುವುದಾಗಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಹಂಚಿಕೊಂಡ ಅವರು, ತಮ್ಮ ಹೊಸ ಯೋಜನೆಯ ಬಗ್ಗೆ ಹೇಳಿದ್ದಾರೆ.

‘ನಾನು ಕೊನೆಗೂ ಕೆಲಸಕ್ಕೆ ಹಿಂತಿರುಗುತ್ತಿದ್ದೇನೆ. ಕೆಲವು ತಿಂಗಳಿನಿಂದ ನಾನು ಸಂಪೂರ್ಣವಾಗಿ ಕೆಲಸವಿಲ್ಲದೇ ಇದ್ದೆ. ಆದರೆ ನನ್ನ ಸ್ನೇಹಿತನೊಂದಿಗೆ ಹೊಸದೊಂದು ಕೆಲಸದ ಯೋಜನೆಯಲ್ಲಿದ್ದೆ. ಅದು ‘ಹೆಲ್ತ್‌ ಪಾಡ್‌ಕಾಸ್ಟ್‌’. ಇದು ತೀರಾ ಅನಿರೀಕ್ಷಿತವಾಗಿದೆ, ಆದರೆ ಇದು ನಾನು ನಿಜವಾಗಿಯೂ ಪ್ರೀತಿಸುವ ವಿಷಯ, ಮತ್ತು ನಾನು ತುಂಬಾ ಭಾವುಕಳಾಗಿದ್ದೇನೆ’ ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ಆರೋಗ್ಯದ ಬಗೆಗಿನ ಪಾಡ್‌ಕಾಸ್ಟ್‌ ಹೊರತರುತ್ತಿರುವುದು ಖುಷಿ ನೀಡುತ್ತಿದೆ. ಕೆಲವರಾದರೂ ಇದರಿಂದ ಉಪಯೋಗ ಪಡೆಯಲಿದ್ದೀರಿ ಎಂದು ಭಾವಿಸುತ್ತೇನೆ ಎಂದಿದ್ದಾರೆ.

ತಾನು ‘ಮಯೋಸಿಟಿಸ್’ (ಸ್ನಾಯು ಉರಿಯೂತ) ಎಂಬ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ಸಮಂತಾ 2022ರಲ್ಲಿ ಬಹಿರಂಗಪಡಿಸಿದ್ದರು. ಚಿಕಿತ್ಸೆಯ ಸಲುವಾಗಿ ಅವರು ಚಿತ್ರರಂಗದಲ್ಲಿ ಅಷ್ಟೊಂದು ಸಕ್ರಿಯರಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.