ADVERTISEMENT

ವಿಚ್ಛೇದನ ವದಂತಿ ನಡುವೆ ತಿಮ್ಮಪ್ಪನ ದರ್ಶನ ಮಾಡಿದ ನಟಿ ಸಮಂತಾ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 11:59 IST
Last Updated 18 ಸೆಪ್ಟೆಂಬರ್ 2021, 11:59 IST
ಸಮಂತಾ
ಸಮಂತಾ   

ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಹಾಗೂ ಪತಿ ನಾಗಚೈತನ್ಯ ನಡುವಿನವಿಚ್ಛೇದನ ವದಂತಿ ಮಧ್ಯೆಯೇಸಮಂತಾ ದೇವರ ಮೊರೆ ಹೋಗಿದ್ದಾರೆ.

ಇಂದು (ಸೆ. 18) ಸಮಂತಾ ದಿಢೀರ್ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ದೇವಸ್ಥಾನದ ಆವರಣದಲ್ಲಿ ಫೋಟೊ ಹಾಗೂ ವಿಡಿಯೊಗಳನ್ನು ತೆಗೆಯಬೇಡಿ ಎಂದು ಮಾಧ್ಯಮದವರ ವಿರುದ್ಧ ಸಿಡುಕಿದ್ದಾರೆ.

ಮಾಧ್ಯಮ ಮಂದಿ ಫೋಟೊ ತೆಗೆಯಲು ಮುಂದಾದಾಗ ‘ನಿಮಗೆ ಬುದ್ದಿ ಇದೆಯಾ?’ ಎಂದು ಸಿಡುಕುವ ಮೂಲಕತೆರಳಿದರು ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಕೆಲವರು ದೇವಾಲಯದ ಆವರಣದಲ್ಲಿನ ಸಮಂತಾ ಫೋಟೊ, ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.

ADVERTISEMENT

ಸದ್ಯ ಸಮಂತಾ ಮತ್ತು ನಾಗಚೈತನ್ಯ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರೆ. ಸಮಂತಾ ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆಯಲು ಸುಮಾರು ₹ 250 ಕೋಟಿ ಜೀವನಾಂಶ ಬೇಡಿಕೆ ಇಟ್ಟಿದ್ದಾರೆ ಎಂದು ಟಾಲಿವುಡ್‌ನ ಬಲ್ಲ ಮೂಲಗಳ ತಿಳಿಸಿವೆ.

ಇಲ್ಲಿಯವರೆಗೂ ನಾಗಚೈತನ್ಯ ಕುಟುಂಬದವರು ಹಾಗೂ ಸಮಂತಾ ಅವರಾಗಲಿ ವಿಚ್ಛೇದನದ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.