ADVERTISEMENT

15ಕ್ಕೆ ‘ಓ ಮೈ ಲವ್‌’ ತೆರೆಗೆ: ನಿರ್ದೇಶಕ ಸ್ಮೈಲ್‌ ಶ್ರೀನು

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 4:07 IST
Last Updated 2 ಜುಲೈ 2022, 4:07 IST
ಅಕ್ಷಿತ್‌ ಶಶಿಕುಮಾರ್‌
ಅಕ್ಷಿತ್‌ ಶಶಿಕುಮಾರ್‌   

ಚಿತ್ರದುರ್ಗ: ರಾಜ್ಯದಾದ್ಯಂತ ಜುಲೈ 15ರಂದು ‘ಓ ಮೈ ಲವ್’ ಸಿನಿಮಾ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ಸ್ಮೈಲ್‌ ಶ್ರೀನು ತಿಳಿಸಿದರು.

ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಚಿತ್ರವು ಹಾಡು, ಟೀಸರ್‌ ಮೂಲಕ ಸದ್ದು ಮಾಡುತ್ತಿದ್ದು, ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚಾಗುತ್ತಿದೆ. ಹಿರಿಯ ನಟ, ಮಾಜಿ ಸಂಸದ ಶಶಿಕುಮಾರ್‌ ಪುತ್ರ ಅಕ್ಷಿತ್‌ ಶಶಿಕುಮಾರ್‌ ನಾಯಕ ನಟನಾಗಿ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ’ ಎಂದರು.

‘ನಾಯಕಿಯಾಗಿ ಕೀರ್ತಿ ಕಲ್ಕೆರಿ ನಟಿಸಿದ್ದು, ಎಸ್‌. ನಾರಾಯಣ್‌, ಸಾಧುಕೋಕಿಲ, ದೇವಗಿಲ್‌, ಟೆನ್ನಿಸ್ ಕೃಷ್ಣ, ಪವಿತ್ರಾ ಲೋಕೇಶ್‌ ಮುಖ್ಯಭೂಮಿಕೆಯಲ್ಲಿದ್ದಾರೆ. ಡಾ.ವಿ. ನಾಗೇಂದ್ರ ಪ್ರಸಾದ್‌ ಸಾಹಿತ್ಯ ರಚಿಸಿದ್ದು, ಜಿಸಿಬಿ ಪ್ರೊಡೆಕ್ಷನ್‌ನಲ್ಲಿ ಜಿ. ರಾಮಾಂಜಿನಿ ಚಿತ್ರವನ್ನು ನಿರ್ಮಿಸಿದ್ದಾರೆ’ ಎಂದು ಹೇಳಿದರು.

ADVERTISEMENT

‘ಚಿತ್ರದುರ್ಗ ನನಗೆ ಎರಡನೇ ಮನೆ ಇದ್ದಂತೆ. ತಂದೆ ಸಂಸದರಾಗಿದ್ದಾಗ ಬಹುಸಮಯವನ್ನು ಈ ನೆಲದಲ್ಲಿ ಕಳೆದಿದ್ದೇನೆ. ಇಲ್ಲಿನ ಜನರ ಆಶೀರ್ವಾದದಿಂದ ನಾಯಕ ನಟನಾಗಿದ್ದೇನೆ. ಕೋವಿಡ್‌ ಲಾಕ್‌ಡೌನ್‌ ಕಾರಣಕ್ಕೆ ಚಿತ್ರ ತೆರೆ ಕಾಣುವುದು ವಿಳಂಬವಾಯಿತು. ನನ್ನ ಮೊದಲ ಚಿತ್ರಕ್ಕೆ ಹಾರೈಸಿ’ ಎಂದು ನಟ ಅಕ್ಷಿತ್‌ ಶಶಿಕುಮಾರ್‌ ಮನವಿ ಮಾಡಿದರು.

ನಟಿಯರಾದ ಕೀರ್ತಿ ಕಲ್ಕೆರಿ, ಅಕ್ಷತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.