ADVERTISEMENT

ನೃತ್ಯ ಸಂಯೋಜಕಿ ಸರೋಜ್‌ ಖಾನ್ ನಿಧನಕ್ಕೆ ಕಂಬನಿ ಮಿಡಿದ ಬಾಲಿವುಡ್‌

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 7:10 IST
Last Updated 3 ಜುಲೈ 2020, 7:10 IST
ನೃತ್ಯ ಸಂಯೋಜಕಿ ಸರೋಜ್ ಖಾನ್
ನೃತ್ಯ ಸಂಯೋಜಕಿ ಸರೋಜ್ ಖಾನ್   

ಖ್ಯಾತ ನೃತ್ಯ ಸಂಯೋಜಕಿಸರೋಜ್ ಖಾನ್ ನಿಧನಕ್ಕೆ ಬಾಲಿವುಡ್‌ ನಟ–ನಟಿಯರು ಕಂಬನಿ ಮಿಡಿದಿದ್ದಾರೆ. ಬಾಲಿವುಡ್‌ ಸಿನಿಮಾ ರಂಗದಲ್ಲಿ ಪ್ರೀತಿಯಿಂದ ‘ಮಾಸ್ಟರ್‌ಜೀ‘ ಎಂದೇ ಕರೆಯುತ್ತಿದ್ದ ಸರೋಜ್ ಅವರ ಜತೆಗಿನ ಒಡನಾಟಗಳನ್ನು ನೆನಪಿಸಿಕೊಳ್ಳುತ್ತಾ, ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ.

‘ನನ್ನ ನೃತ್ಯ ಗುರು, ಒಳ್ಳೆಯ ಸ್ನೇಹಿತೆ ಸರೋಜ್ ಖಾನ್ ಅವರನ್ನು ಕಳೆದುಕೊಂಡಿರುವುದು ತೀವ್ರ ದುಃಖ ತಂದಿದೆ. ನಾನು ಇಂದು ಇಷ್ಟು ಎತ್ತರಕ್ಕೆ ಬೆಳೆಯಲು ನೆರವಾದ ಅವರಿಗೆ ನಾನೆಂದು ಚಿರರುಣಿಯಾಗಿರುತ್ತೇನೆ. ಅವರೊಬ್ಬ ಅತ್ಯದ್ಭುತ ಪ್ರತಿಭಾವಂತ ವ್ಯಕ್ತಿ. ನಾನು ಅವರನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಅವರ ಅಗಲಿಕೆಯಿಂದ ನೊಂದಿರುವ ಕುಟುಂಬಕ್ಕೆ ತೀವ್ರ ಸಂತಾಪಗಳು' ಎಂದು ಬಾಲಿವುಡ್ ನಟಿಮಾಧುರಿ ದೀಕ್ಷಿತ್ ಟ್ವೀಟ್ ಮಾಡಿದ್ದಾರೆ.

ನಟಿಕಾಜಲ್ ಅಗರ್‌ವಾಲ್‌ ಟ್ವೀಟ್ ಮಾಡಿ,‘ಪ್ರತಿಯೊಬ್ಬ ಸಿನಿ ಕಲಾವಿದನಿಗೆ ಒಂದೇ ಕನಸು; ನಿಮ್ಮ ಮಾರ್ಗದರ್ಶನದಲ್ಲಿ ನೃತ್ಯಮಾಡಬೇಕೆಂಬುದು. ನಾನು ಅದನ್ನು ಮಿಸ್‌ ಮಾಡಿಕೊಂಡೆ ಮೇಡಂ' ಎಂದಿದ್ದಾರೆ.

ADVERTISEMENT

***

ಬೆಳಿಗ್ಗೆ ಬೆಳಿಗ್ಗೆಯೇ ‘ಖ್ಯಾತ ಕೊರಿಯೊಗ್ರಾಫರ್ ಸರೋಜ್‌ಖಾನ್ ಇನ್ನಿಲ್ಲ‘ ಎಂಬ ದುಃಖದ ಸುದ್ದಿ ಕೇಳಿದೆ. ಸರೋಜ್ ಅವರು ‘ಯಾರು ಬೇಕಾದರೂ ನೃತ್ಯ ಮಾಡಬಹುದು‘ ಎನ್ನುವಂತೆ ನೃತ್ಯ ಕಲಿಸುತ್ತಿದ್ದರು. ಅವರಿಂದ ಸಿನಿಮಾ ಇಂಡಸ್ಟ್ರಿಗೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

– ಅಕ್ಷಯ್‌ ಕುಮಾರ್, ಬಾಲಿವುಡ್ ನಟ.

***
ನನ್ನಂತಹ ಅನೇಕರಿಗೆ ಸ್ಪೂರ್ತಿದಾಯಕವಾಗಿದ್ದವರು ನೀವು ಸರೋಜ್‌ಜಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.

– ಫರ‍್ಹಾ ಖಾನ್, ನಟಿ ನಿರ್ದೇಶಕಿ, ನಿರ್ಮಾಪಕಿ, ಸಿನಿಮೆಟೊಗ್ರಾಫರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.