
2021ರಲ್ಲಿ ತೆರೆಕಂಡ ವಿಜಯ ರಾಘವೇಂದ್ರ ನಟನೆಯ ‘ಸೀತಾರಾಮ್ ಬಿನೋಯ್’ ಚಿತ್ರ ಒಂದು ಮಟ್ಟಿನ ಯಶಸ್ಸು ಗಳಿಸಿತ್ತು. ಅದರ ಸೀಕ್ವೆಲ್ ಕಥೆಯನ್ನು ಹೊಂದಿರುವ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ದೇವಿಪ್ರಸಾದ್ ಶೆಟ್ಟಿ ನಿರ್ದೇಶನದ ಈ ಚಿತ್ರ ಫೆ.20ರಂದು ತೆರೆಗೆ ಬರಲಿದೆ.
‘ಸೀತಾರಾಮ್ ಬಿನೋಯ್’ ನನ್ನ ವೃತ್ತಿಜೀವನಕ್ಕೆ ವಿಶೇಷ ಬಲ ಕೊಟ್ಟ ಸಿನಿಮಾ. ಆ ಚಿತ್ರದ ಬರವಣಿಗೆ, ಪ್ರಸ್ತುತಿ ಎಲ್ಲವೂ ಶಕ್ತಿ ನೀಡಿತ್ತು. ನಂತರ ಅದೇ ತಂಡ ಒಟ್ಟಾಗಿ ‘ಕೇಸ್ ಆಫ್ ಕೊಂಡಾಣ’ ಮಾಡಿದೆವು. ಈಗ ಅದೇ ಜಾನರ್‌ನ ಮತ್ತೊಂದು ಕಥೆಯೊಂದಿಗೆ ಬಂದಿದ್ದೇವೆ. ನಿರ್ದೇಶಕರು ಒಳ್ಳೆಯ ಸ್ಕ್ರಿಪ್ಟ್ ಬರೆದಿದ್ದಾರೆ. ನಿರ್ಮಾಪಕ ಸಾತ್ವಿಕ್ ಅದಕ್ಕೆ ಬಲವಾಗಿ ನಿಂತಿದ್ದಾರೆ. ನವನೀತ್ ಶ್ಯಾಮ್ ಸಂಗೀತ ಚಿತ್ರದ ಜೀವಾಳ. ಚಿತ್ರ ಮಾಡುವುದು ಎಷ್ಟು ಕಷ್ಟವೋ, ಬಿಡುಗಡೆ ಕೂಡ ಅಷ್ಟೇ ಕಷ್ಟ. ಈ ಚಿತ್ರದ ಬಿಡುಗಡೆಗೆ ಪವನ್ ಒಡೆಯರ್ ಬೆಂಬಲವಾಗಿ ನಿಂತಿದ್ದಾರೆ’ ಎಂದರು ವಿಜಯ ರಾಘವೇಂದ್ರ.
ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೇಮಂತ್ ಆಚಾರ್ಯ ಛಾಯಾಚಿತ್ರಗ್ರಹಣ, ಶಶಾಂಕ್ ಸಂಕಲನ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.