ಆಲ್ಝೈಮರ್ ರೋಗದ ಕುರಿತಾದ ಕಥೆ ಹೊಂದಿರುವ ‘ಸೆಪ್ಟೆಂಬರ್ 21’ ಚಿತ್ರ ಇತ್ತೀಚೆಷ್ಟೇ ಸೆಟ್ಟೇರಿದೆ. ಬಾಲಿವುಡ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಮುಖ್ಯ ಪಾತ್ರದಲ್ಲಿದ್ದಾರೆ. ಕರೆನ್ ಕ್ಷಿತಿ ಸುವರ್ಣ ನಿರ್ದೇಶನವಿದೆ.
‘ನಾನು ಈ ಹಿಂದೆ ‘ಹೈಡ್ ಆಂಡ್ ಸೀಕ್’ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದೆ. ಪೂರ್ಣಪ್ರಮಾಣದ ನಿರ್ದೇಶಕಿಯಾಗಿ ಮೊದಲ ಚಿತ್ರ. ಆಲ್ಝೈಮರ್ ರೋಗಿ ಮತ್ತು ಆತನ ಆರೈಕೆ ಮಾಡುವ ನರ್ಸೊಬ್ಬಳ ನಡುವಿನ ಕಥೆಯನ್ನು ಹೊಂದಿರುವ ಈ ಚಿತ್ರವಿದು. ಈ ಕಥೆಯನ್ನು ಪಿ.ರಾಜಶೇಖರ್ ಅವರು ಮಲಯಾಳದಲ್ಲಿ ಬರೆದಿದ್ದಾರೆ. ಹಿಂದಿ ಸೇರಿ ಹಲವು ಭಾಷೆಗಳಲ್ಲಿ ಚಿತ್ರ ಸಿದ್ಧಗೊಳ್ಳಲಿದೆ. ಸದ್ಯದಲ್ಲೇ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ’ ಎಂದು ಕ್ಷಿತಿ.
ಪ್ರವೀಣ್ ಕುಮಾರ್ ಸಿಂಗ್ ಸಿಸೋಡಿಯಾ, ಜರೀನಾ ವಹಾಬ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ರಿಲಯನ್ಸ್ ಎಂಟರ್‌ಟೈನ್‌ಮೆಂಟ್‌ನ ಅಮಿತ್ ಅವಸ್ಥಿ ಮತ್ತು ಫಾಕ್ಸ್ ಆನ್ ಸ್ಟೇಜ್‌ನ ಫ್ರೆಡ್ರಿಕ್ ಡಿ ವೋಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
‘ಇದೇ ಮೊದಲ ಬಾರಿಗೆ ಕಿರಿಯ ವಯಸ್ಸಿನ ನಿರ್ದೇಶಕಿಯ ಜತೆ ಕೆಲಸ ಮಾಡುತ್ತಿದ್ದೇನೆ. ಆಲ್ಝೈಮರ್ ರೋಗದಿಂದ ಬಳಲುತ್ತಿರುವ ರೋಗಿಯನ್ನು ಶುಶ್ರೂಷೆ ಮಾಡುವ ಕೇರ್ ಟೇಕರ್ ಪಾತ್ರವನ್ನು ನಿರ್ವಹಿಸಿಸುತ್ತಿದ್ದೇನೆ. ಕಮಲಾ ನನ್ನ ಪಾತ್ರದ ಹೆಸರು. ನನ್ನ ತಂದೆ ಉತ್ತರ ಪ್ರದೇಶದವರು. ಹಾಗಾಗಿ ನನಗೆ ಹಿಂದಿ ಮಾತನಾಡಲು ಹಾಗೂ ಓದಲು ಬರುತ್ತದೆ’ ಎಂದರು ಪ್ರಿಯಾಂಕಾ.
ವಿನಯ್ ಚಂದ್ರ ಸಂಗೀತ, ಅನಿಲ್ ಕುಮಾರ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.