ADVERTISEMENT

ರಶ್ಮಿಕಾ ನಟನೆಯ ‘ದಿ ಗರ್ಲ್‌ಫ್ರೆಂಡ್‌’ ಸೇರಿದಂತೆ 7 ಸಿನಿಮಾಗಳು ಇಂದು ತೆರೆಗೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 23:57 IST
Last Updated 6 ನವೆಂಬರ್ 2025, 23:57 IST
   
ಸಾಹಸಸಿಂಹ ವಿಷ್ಣುವರ್ಧನ್‌ ನಟನೆಯ ‘ಯಜಮಾನ’ ಇಂದು(ನ.7) ಮರು
ಬಿಡುಗಡೆಯಾಗುತ್ತಿದ್ದು, ಇದರ ಜೊತೆಗೆ ಏಳು ಹೊಸ ಕನ್ನಡ ಚಿತ್ರಗಳು ರಿಲೀಸ್‌ ಆಗುತ್ತಿವೆ.

ರೋಣ

ಬಿ.ಆರ್.ಕೆ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗಿರುವ ಸಿನಿಮಾ ಇದಾಗಿದ್ದು, ಸತೀಶ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಅಪ್ಪ-ಮಗನ ಕಥೆಯನ್ನು ಒಳಗೊಂಡಿರುವ ಈ ಸಿನಿಮಾದಲ್ಲಿ, ರಘು ರಾಜನಂದ ಹಾಗೂ ಪ್ರಕೃತಿ ಪ್ರಸಾದ್‌ ಮುಖ್ಯಭೂಮಿಕೆಯಲ್ಲಿದ್ದಾರೆ. ಶರತ್ ಲೋಹಿತಾಶ್ವ ನಾಯಕನ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ.

ಐ ಆ್ಯಮ್‌ ಗಾಡ್‌

ADVERTISEMENT

ರವಿ ಗೌಡ ನಟಿಸಿ, ನಿರ್ದೇಶಿಸಿ, ನಿರ್ಮಿಸಿರುವ ಈ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಪ್ರೇಮಕಥೆಯಾಗಿದೆ. ಚಿತ್ರದಲ್ಲಿ ನಾಯಕಿಯಾಗಿ ವಿಜೇತಾ ನಟಿಸಿದ್ದಾರೆ. ರವಿಶಂಕರ್‌, ಅವಿನಾಶ್‌, ಅರುಣ ಬಾಲರಾಜ್‌ ಹಾಗೂ ನಿರಂಜನ್‌ ಕುಮಾರ್‌ ತಾರಾಬಳಗದಲ್ಲಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ ನಿರ್ದೇಶನ, ಜಿತಿನ್‌ ದಾಸ್‌ ಛಾಯಾಚಿತ್ರಗ್ರಹಣ ಸಿನಿಮಾಗಿದೆ.

ಇದರ ಜೊತೆಗೆ ‘ಹೇ ಪ್ರಭು’, ‘ಗಡಾಕೇಸರಿ’, ‘ನಿಷಿದ್ಧ’ ಹಾಗೂ ‘ಡಿಡಿಡಿ’ ಎಂಬ ಕನ್ನಡ ಸಿನಿಮಾಗಳೂ ತೆರೆಕಂಡಿವೆ.

ದಿ ಗರ್ಲ್‌ಫ್ರೆಂಡ್‌

ಕನ್ನಡಿಗರೇ ಆದ ನಟಿ ರಶ್ಮಿಕಾ ಮಂದಣ್ಣ ಹಾಗೂ ದೀಕ್ಷಿತ್‌ ಶೆಟ್ಟಿ ನಟಸಿರುವ ತೆಲುಗು ಸಿನಿಮಾ ‘ದಿ ಗರ್ಲ್‌ಫ್ರೆಂಡ್‌’ ಕೂಡಾ ಇಂದು ತೆರೆಕಾಣುತ್ತಿದೆ. ಸಿನಿಮಾವನ್ನು ರಾಹುಲ್ ರವೀಂದ್ರನ್ ನಿರ್ದೇಶನ ಮಾಡಿದ್ದು, ನಿರ್ಮಾಪಕ ಅಲ್ಲು ಅರವಿಂದ್ ಚಿತ್ರವನ್ನು ಪ್ರಸ್ತುಪಡಿಸುತ್ತಿದ್ದಾರೆ. ತೆಲುಗು, ಹಿಂದಿಯಲ್ಲಷ್ಟೇ ಈ ಸಿನಿಮಾ ತೆರೆಕಾಣುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.