ADVERTISEMENT

ಚಿತ್ರೀಕರಣ ವೇಳೆ ಶಾಹಿದ್‌ಗೆ ಚೆಂಡು ತಗುಲಿ ತುಟಿಗೆ ಬಿದ್ದಿತ್ತು 25 ಹೊಲಿಗೆ

ತೆಲುಗಿನ 'ಜೆರ್ಸಿ'ಯ ಹಿಂದಿ ರೀಮೇಕ್‌ ಚಿತ್ರದ ಚಿತ್ರೀಕರಣದ ವೇಳೆ ಘಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ನವೆಂಬರ್ 2021, 7:35 IST
Last Updated 28 ನವೆಂಬರ್ 2021, 7:35 IST
ನಟ ಶಾಹೀದ್‌ ಕಪೂರ್‌
ನಟ ಶಾಹೀದ್‌ ಕಪೂರ್‌   

ನವದೆಹಲಿ: ಬಾಲಿವುಡ್‌ ನಟ ಶಾಹೀದ್‌ ಕಪೂರ್‌ ಇತ್ತೀಚೆಗೆ ಅಭಿಮಾನಿಗಳ ಜೊತೆಗಿನ ಲೈವ್‌ ಸಂವಾದದಲ್ಲಿ ತಮ್ಮ ಮುಂಬರುವ ಚಿತ್ರ 'ಜೆರ್ಸಿ' ಚಿತ್ರೀಕರಣದ ವೇಳೆ ಚೆಂಡು ತಗುಲಿದ್ದರಿಂದ 25 ಹೊಲಿಗೆಗಳನ್ನು ಹಾಕಿಸಿಕೊಂಡಿದ್ದಾಗಿ ಬಹಿರಂಗ ಪಡಿಸಿದ್ದಾರೆ.

ಅಭಿಮಾನಿಯೊಬ್ಬರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಾಹೀದ್‌ ಕಪೂರ್‌, 'ಈ ಸಿನಿಮಾ ಚಿತ್ರೀಕರಣದ ವೇಲೆ ಚೆಂಡು ತಗುಲಿ ನನ್ನ ತುಟಿ ಒಡೆದು ಹೋಯಿತು. ಇದು 'ಜೆರ್ಸಿ' ಸಿನಿಮಾದ ನನ್ನ ಕೆಟ್ಟ ನೆನಪು. ನಾನು ಮೊದಲಿನಂತೆ ಕಾಣುವುದಿಲ್ಲ ಎಂದೇ ಭಾವಿಸಿದ್ದೆ' ಎಂದು ತಿಳಿಸಿದ್ದಾರೆ.

'ಕೆಳಗಿನ ತುಟಿಗೆ ಚೆಂಡು ಬಡಿಯಿತು. ತುಟಿ ಒಡೆದಿದ್ದರಿಂದ ಚಿತ್ರೀಕರಣವನ್ನು ಎರಡು ತಿಂಗಳ ಕಾಲ ಸ್ಥಗಿತಗೊಳಿಸುವಂತಾಯಿತು. ನನಗೆ ಸುಮಾರು 25 ಹೊಲಿಗೆಗಳು ಬಿದ್ದವು. ನನ್ನ ತುಟಿ ಮೊದಲಿನಂತೆ ಸಾಮಾನ್ಯ ರೂಪಕ್ಕೆ ಬರಲು ಮೂರು ತಿಂಗಳು ಬೇಕಾಯಿತು. ಈಗಲೂ ನನಗೆ ತುಟಿಯ ಗಾಯ ಸರಿ ಹೋಗಿದೆ ಎಂದೆನಿಸುತ್ತಿಲ್ಲ. ತುಟಿಯ ಈ ಭಾಗದಲ್ಲಿ ಚರ್ಮ ಸುಕ್ಕುಗಟ್ಟಿದೆ ಎಂದೆನಿಸುತ್ತದೆ (ತುಟಿಯ ಭಾಗವನ್ನು ತೋರಿಸುತ್ತ...). ಹಾಗಾಗಿ ನಾನು ಈ ಸಿನಿಮಾಗೆ ರಕ್ತವನ್ನು ನೀಡಿದ್ದೇನೆ' ಎಂದು ಶಾಹೀದ್‌ ಕಪೂರ್‌ ಲೈವ್‌ ಸಂವಾದದಲ್ಲಿ ಹೇಳಿದ್ದಾರೆ.

ADVERTISEMENT

ಗೌತಮ್‌ ತಿನ್ನಾನುರಿ ನಿರ್ದೇಶನದ ಜೆರ್ಸಿ ಸಿನಿಮಾವನ್ನು ಅಲ್ಲು ಅರವಿಂದ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಮೃಣಾಲ್‌ ಠಾಕೂರ್‌, ಪಂಕಜ್‌ ಕಪೂರ್, ರೋನಿತ್‌ ಕರ್ಮಾ ಮುಂತಾದ ಪಾತ್ರವರ್ಗವಿದೆ. ಇದು 2019ರ ತೆಲುಗು ಚಿತ್ರ 'ಜೆರ್ಸಿ' ರೀಮೇಕ್‌ ಚಿತ್ರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.