
ಚಿತ್ರ ಕೃಪೆ:
ನವದೆಹಲಿ: ನಟ ಶಾರುಖ್ ಖಾನ್ ಹುಟ್ಟುಹಬ್ಬ ಆಚರಣೆಯ ಸಂದರ್ಭದಲ್ಲಿ ಅವರನ್ನು 'ಬೆಂಜಮಿನ್ ಬಟನ್' ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಕರೆದಿದ್ದಾರೆ.
ಭಾನುವಾರದಂದು ಶಾರುಖ್ ಖಾನ್ ಅವರು 60ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಬಗ್ಗೆ ಶಶಿ ತರೂರ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ, ಶಾರುಖ್ ಅವರಿಗೆ 60 ವರ್ಷ ವಯಸ್ಸು ಆಗಿದೆ ಎಂಬುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಡೇವಿಡ್ ಫಿಂಚರ್ ನಿರ್ದೇಶನದ "ದಿ ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್ ಬಟನ್"ನ ನಾಯಕನಂತೆಯೇ ಶಾರುಖ್ ಕಾಣುತ್ತಾರೆ’ ಎಂದು ಬರೆದುಕೊಂಡಿದ್ದಾರೆ.
ಶಾರುಖ್ ಖಾನ್ ಅವರು ಇಂದಿಗೂ 20 ವರ್ಷಗಳ ಹಿಂದಿನವರಂತೆ ಕಂಡು, ಅವರ ಕೇಶವಿನ್ಯಾಸವು ಯೌವ್ವನವನ್ನು ನೆನಪಿಸುತ್ತದೆ. ಅವರು ಸಿನಿಮಾ, ನಟನೆಯಲ್ಲಿ ನಿರಂತರ ಸಕ್ರೀಯವಾಗಿರುವುದನ್ನು ನೋಡಿದರೆ 60 ವರ್ಷಕ್ಕೆ ಕಾಲಿಡುತ್ತಿದ್ದಾರೆ ಎಂದು ನಂಬಲು ಅಸಾಧ್ಯ. ಶಾರುಖ್ ಅವರ ಜೀವನದ ಮೈಲಿಗಲ್ಲಿಗೆ ಅಭಿನಂದನೆಗಳು ಎಂದು ಶಶಿ ತರೂರ್ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.