ಮೋಹನ್ ಭಾಗವತ್
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವದ ಅಂಗವಾಗಿ ನಿರ್ಮಾಣವಾಗಿರುವ ‘ಶತಕ್’ ಸಿನಿಮಾ ಕುರಿತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮಾತನಾಡಿದ್ದಾರೆ.
ದೆಹಲಿಯ ಕೇಶವ ಕೃಪದಲ್ಲಿ ಮಾತನಾಡಿದ ಅವರು ‘ಶತಕ್’ ಸಿನಿಮಾ ಕೇವಲ ಚಲನಚಿತ್ರವಲ್ಲ, ಒಂದು ವೈಚಾರಿಕ ಪಯಣದ ಜೀವಂತ ಚಿತ್ರಣ ಎಂದು ಅವರು ಬಣ್ಣಿಸಿದರು.
ಆರ್‌ಎಸ್‌ಎಸ್ ಸ್ಥಾಪಿಸಿದ ಹೆಡ್ಗೇವಾರ್, ತಮ್ಮ ಜೀವನವನ್ನು ರಾಷ್ಟ್ರ ಸಂಘಟನೆ ಮತ್ತು ಸಾಮಾಜಿಕ ಜಾಗೃತಿಗೆ ಸಮರ್ಪಿಸಿದರು. ಅವರ ಜೀವನವು, ತ್ಯಾಗ, ಶಿಸ್ತು ಮತ್ತು ಏಕತೆಯ ಸಂಕೇತವಾಗಿದೆ ಎಂದರು.
ವಿಶೇಷವಾಗಿ ಶತಕ್ ಸಿನಿಮಾದ ಒಂದು ಹಾಡಿನಲ್ಲಿ ಹೆಡ್ಗೇವಾರ್ ಅವರ ಬಾಲ್ಯವನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ ಎಂದರು.
ಚಿತ್ರದ ನಿರ್ಮಾಪಕರು, ಕಲಾವಿದರು ಹಾಗೂ ತಂತ್ರಜ್ಞರಿಗೆ ಅಭಿನಂದನೆ ಸಲ್ಲಿಸಿದ ಅವರು, ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು. ಈ ಸಿನಿಮಾ ಫೆಬ್ರುವರಿ 20ರಂದು ದೇಶದಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.