ADVERTISEMENT

ಶಿಲ್ಪಾ ಶೆಟ್ಟಿಗೆ ಹೆಣ್ಣು ಮಗು: ರಾಜ್‌ ಕುಂದ್ರ ಮನೆಯಲ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 7:06 IST
Last Updated 21 ಫೆಬ್ರುವರಿ 2020, 7:06 IST
   

ಮುಂಬೈ: ಬಾಲಿವುಡ್‌ ನಟಿ ಹಾಗೂ ಕನ್ನಡತಿ ಶಿಲ್ಪಾ ಶೆಟ್ಟಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರ, ಮನೆಗೆ ಹೊಸ ಸದಸ್ಯೆ ಬಂದಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ.

ಫೆಬ್ರುವರಿ 15ರಂದು ಶಿಲ್ಪಾ ಶೆಟ್ಟಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮಗುವಿಗೆ ಸಮಿಶಾ ಶೆಟ್ಟಿ ಕುಂದ್ರಾ ಎಂದು ನಾಮಕರಣ ಮಾಡಲಾಗಿದೆ. ಈಗ ಶಿಲ್ಪಾ ಮತ್ತು ರಾಜ್‌ ಕುಂದ್ರ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ನಮ್ಮ ಕುಂಟುಂಬಕ್ಕೆ ಸಮಿಶಾ ಶೆಟ್ಟಿ ಕುಂದ್ರ ಹೊಸ ಸದಸ್ಯೆಯಾಗಿ ಮನೆ ತುಂಬಿದ್ದಾರೆ. ಈಸಂತಸವನ್ನುವ್ಯಕ್ತಪಡಿಸಲು ನನಗೆ ಆಗುತ್ತಿಲ್ಲಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ನಮ್ಮ ಪ್ರಾರ್ಥನೆ ಫಲಿಸಿದ್ದು ಏಂಜಲ್‌ ಮನೆ ತುಂಬಿರುವುದು ಸಂತಸ ನೂರ್ಮಡಿಸಿದೆ ಎಂದು ಶಿಲ್ಪಾ ಶೆಟ್ಟಿ ಕೂಡ ಫೋಸ್ಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.