ADVERTISEMENT

Vedha: 60ರ ದಶಕದ ಕ್ರೂರ ಕಥೆ ಹೇಳಲು ಬರುತ್ತಿದ್ದಾರೆ ಶಿವಣ್ಣ, ಹರ್ಷ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 13:21 IST
Last Updated 23 ಜೂನ್ 2022, 13:21 IST
ವೇದಾ ಮೋಷನ್ ಪೋಸ್ಟರ್
ವೇದಾ ಮೋಷನ್ ಪೋಸ್ಟರ್   

ಬೆಂಗಳೂರು:ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ 125ನೇ ಚಿತ್ರ 'ವೇದಾ'ಎಂಬುದು ಈಗಾಗಲೇ ಬಹಿರಂಗಗೊಂಡಿತ್ತು. ಈಗ ಈಸಿನಿಮಾದ ಮೋಷನ್ ಪೋಸ್ಟರ್​ ಅನಾವರಣವಾಗಿದೆ.

ವೇದಾ ಚಿತ್ರವನ್ನು ಝೀ-ಸ್ಟುಡಿಯೋಸ್​ ಜೊತೆಗೂಡಿ ಗೀತಾ ಸ್ಟುಡಿಯೋಸ್ ಮೂಲಕ ಗೀತಾ ಶಿವರಾಜ್ ಕುಮಾರ್ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಭಜರಂಗಿ ಎ.ಹರ್ಷ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಹಾಗೆಯೇ ಇದು ಶಿವರಾಜ್‌ಕುಮಾರ್-ಹರ್ಷ ಜೋಡಿಯ 4ನೇ ಚಿತ್ರ ಎಂಬುದು ವಿಶೇಷ.

ಇನ್ನು ವೇದಾ ಚಿತ್ರವು 1960ರ ದಶಕದಲ್ಲಿ ನಡೆಯುವ ಕ್ರೂರ ಕಥಾಹಂದರ ಹೊಂದಿದೆ. ಮೋಷನ್ ಪೋಸ್ಟರ್ ಅನ್ನು ಟ್ವಿಟರ್‌ನಲ್ಲಿ ಎ ಹರ್ಷಾ ಹಂಚಿಕೊಂಡಿದ್ದಾರೆ.ಚಿತ್ರದಲ್ಲಿ ಶಿವಣ್ಣನ ಮಗಳಾಗಿ ಅರುಣ್ ಸಾಗರ್ ಅವರ ಪುತ್ರಿ ಅದಿತಿ ಸಾಗರ್​ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯಾಗಿ ಮಗಳು ಜಾನಕಿ ನಟಿ ಗಾನವಿ ಇದ್ದು, ಇನ್ನುಳಿದಂತೆ ಕುರಿ ಪ್ರತಾಪ್, ಜಗ್ಗಪ್ಪ, ಉಮ್ರಾಶ್ರೀ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

ADVERTISEMENT

ಇನ್ನು ವೇದಾ ಬಹುಭಾಷಾ ಸಿನಿಮಾವಾಗಿ ಮೂಡಿ ಬರುತ್ತಿದ್ದು, ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂನಲ್ಲಿ ತೆರೆ ಕಾಣಲಿದೆ. ಈಗಾಗಲೇ ಚಿತ್ರಕ್ಕೆ ಭರ್ಜರಿ ಸೆಟ್ ಹಾಕಲಾಗಿದ್ದು, ಶೂಟಿಂಗ್ ಪ್ರಾರಂಭವಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.